×
Ad

ತಮಿಳು ಚಲನಚಿತ್ರ ನಿರ್ಮಾಪಕರು,ವಿತರಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

Update: 2022-08-02 11:14 IST
Photo:PTI

ಚೆನ್ನೈ: ಕೆಲವು ತಮಿಳು ಚಲನಚಿತ್ರ ನಿರ್ಮಾಪಕರು ಹಾಗೂ  ವಿತರಕರ ವಿರುದ್ಧ ಶಂಕಿತ ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಮಂಗಳವಾರ  ತಮಿಳುನಾಡಿನಾದ್ಯಂತ ನಲವತ್ತಕ್ಕೂ ಹೆಚ್ಚು ಸ್ಥಳಗಳನ್ನು ಶೋಧ ಕಾರ್ಯ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲೈಪುಲಿ ಥಾನು, ಎಸ್‌ಆರ್ ಪ್ರಭು, ಅನ್ಬು ಚೆಝಿಯನ್ ಮತ್ತು ಜ್ಞಾನವೇಲ್ ರಾಜಾ ಸೇರಿದಂತೆ ಸುಮಾರು 10 ತಮಿಳು ಚಲನಚಿತ್ರ ನಿರ್ಮಾಪಕರು ಹಾಗೂ  ವಿತರಕರಿಗೆ ಸಂಬಂಧಿಸಿದ ಆವರಣದಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News