ದೇಶದಲ್ಲಿ 8ನೇ ಪ್ರಕರಣ: ದಿಲ್ಲಿಯಲ್ಲಿ ಮತ್ತೋರ್ವ ವ್ಯಕ್ತಿಗೆ ಮಂಕಿಪಾಕ್ಸ್‌ ಪಾಸಿಟಿವ್‌

Update: 2022-08-02 14:15 GMT
Photo: ಸಾಂದರ್ಭಿಕ ಚಿತ್ರ/ಪಿಟಿಐ

ಹೊಸದಿಲ್ಲಿ: ವಿದೇಶಿ ಪ್ರಯಾಣದ ಇತ್ತೀಚಿನ ಇತಿಹಾಸವಿಲ್ಲದ 35 ವರ್ಷದ ನೈಜೀರಿಯನ್ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್‌ ಪಾಸಿಟಿವ್‌ ಕಂಡುಬಂದಿದೆ. ಇದು ದೇಶದ ಎಂಟನೇ ಮತ್ತು ದಿಲ್ಲಿಯ ಮೂರನೇ ಪ್ರಕರಣವಾಗಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.


ವ್ಯಕ್ತಿಯನ್ನು ಸೋಮವಾರ ದಿಲ್ಲಿ ಸರ್ಕಾರ ನಡೆಸುವ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.

ದಿಲ್ಲಿಯ ಮೊದಲ ಮಂಕಿಪಾಕ್ಸ್ ಪಾಸಿಟಿವ್‌ ವ್ಯಕ್ತಿಯನ್ನು ಸೋಮವಾರ ರಾತ್ರಿ ಡಿಸ್ಚಾರ್ಜ್ ಮಾಡಲಾಗಿದೆ.

ಮಂಕಿಪಾಕ್ಸ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಆಸ್ಪತ್ರೆಯ ಅಧಿಕಾರಿಗಳಿಗೆ ಸಮೀಪದ ಮೂಲಗಳು   ದಿಲ್ಲಿಯಲ್ಲಿ ಮೂರನೇ ಪ್ರಕರಣ ವರದಿಯಾಗಿದೆ ಎಂದು ದೃಢಪಡಿಸಿದೆ.

"ಈ ವ್ಯಕ್ತಿಯಲ್ಲಿ (ಮೂರನೇ ಪ್ರಕರಣ) ನಿನ್ನೆ ಮಂಕಿಪಾಕ್ಸ್‌ ಪಾಸಿಟಿವ್‌ ಕಂಡುಬಂದಿದೆ. ಆದರೆ, ಅವರು   ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ಶಂಕಿತ ಪ್ರಕರಣಗಳನ್ನು ಪ್ರಸ್ತುತ ಎಲ್‌ಎನ್‌ಜೆಪಿ ಆಸ್ಪತ್ರೆಯ ಮಂಕಿಪಾಕ್ಸ್ ಐಸೋಲೇಶನ್ ವಾರ್ಡ್‌ನಲ್ಲಿ ದಾಖಲಿಸಲಾಗಿದೆ" ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

"ನಾವು ಜಾಗರೂಕರಾಗಿದ್ದೇವೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News