'ಲಾಲ್ ಸಿಂಗ್ ಛಡ್ಡಾ'​ ಸಿನಿಮಾಕ್ಕೆ ಸಂಬಂಧಿಸಿ 'ವಾರ್ತಾಭಾರತಿ' ಹೆಸರಲ್ಲಿ ಸುಳ್ಳು ಸುದ್ದಿ ವೈರಲ್

Update: 2022-08-05 12:19 GMT

ಮಂಗಳೂರು, ಆ.3: ನಟ, ನಿರ್ದೇಶಕ ಆಮಿರ್ ಖಾನ್ ಅವರ ಹೊಸ ಚಿತ್ರ 'ಲಾಲ್ ಸಿಂಗ್ ಛಡ್ಡಾ'ಗೆ ಸಂಬಂಧಿಸಿ 'ವಾರ್ತಾಭಾರತಿ' ವೆಬ್ ಸೈಟ್ ನ ಸುದ್ದಿಯಂತೆ ಕಾಣುವ ನಕಲಿ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲಾಲ್ ಸಿಂಗ್ ಛಡ್ಡಾ​ ಆಗಸ್ಟ್ 11ರಂದು ಬಿಡುಗಡೆಯಾಗಲಿದೆ. ಆ ಸಿನಿಮಾ ವೀಕ್ಷಿಸಬಾರದು ಎಂದು ಬಲಪಂಥೀಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಈ ನಡುವೆ ಬುಧವಾರದಿಂದ ವಾರ್ತಾಭಾರತಿ ಹೆಸರು ಹಾಗೂ ಲೋಗೋವನ್ನು ದುರುಪಯೋಗ ಮಾಡಿಕೊಂಡು ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ.

ವಾರ್ತಾಭಾರತಿ ವೆಬ್ ಸೈಟ್ ನಲ್ಲಿರುವ ಲೋಗೋವನ್ನು ಬಳಸಿಕೊಂಡು ಅದರ ಜೊತೆ ಆಮಿರ್ ಖಾನ್ ಅವರದ್ದು ಎಂಬಂತೆ  ಒಂದು ಹೇಳಿಕೆಯನ್ನು ಸೇರಿಸಿ ಸುದ್ದಿಯ ಸ್ಕ್ರೀನ್ ಶಾಟ್ ನಂತೆ ವಿನ್ಯಾಸ ಮಾಡಿ ವಾಟ್ಸ್ ಆ್ಯಪ್ ಹಾಗೂ ಫೇಸ್ ಬುಕ್ ಗಳಲ್ಲಿ ಇದನ್ನು ವೈರಲ್ ಮಾಡಲಾಗುತ್ತಿದೆ.

ಆದರೆ ಆಮಿರ್ ಖಾನ್ ಅಂತಹ ಯಾವುದೇ ಹೇಳಿಕೆ ನೀಡಿಲ್ಲ, ವಾರ್ತಾಭಾರತಿ ಅಂತಹ ಯಾವುದೇ ಸುದ್ದಿಯನ್ನು ಪ್ರಕಟಿಸಿಲ್ಲ.

ಹೀಗೆ ವಾಟ್ಸ್ ಆ್ಯಪ್ ಹಾಗೂ ಫೇಸ್ ಬುಕ್ ಗಳಲ್ಲಿ​ 'ವಾರ್ತಾಭಾರತಿ' ಹೆಸರು ದುರುಪಯೋಗ ಮಾಡಿಕೊಂಡು ಸುಳ್ಳು ಸುದ್ದಿ ಹರಡುವ ಪೋಸ್ಟ್ ಮತ್ತು ಮೆಸೇಜ್ ಗಳನ್ನು ಹಾಕಿದವರು ಹಾಗೂ ಅದನ್ನು ಶೇರ್ ಮಾಡಿಕೊಳ್ಳುವವರ ಮಾಹಿತಿಯನ್ನು ಪೊಲೀಸರಿಗೆ ತಲುಪಿಸಿ ದೂರು ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News