ಚೀನಾ: ಶಿಶುವಿಹಾರದ ಮೇಲೆ ದಾಳಿ 3 ಮಂದಿಯ ಹತ್ಯೆ, 6 ಮಂದಿಗೆ ಗಾಯ

Update: 2022-08-03 17:49 GMT

ಬೀಜಿಂಗ್, ಆ.3: ದಕ್ಷಿಣ ಚೀನಾದ ಜಿಯಾಂಗ್‌ಕ್ಸಿಯ ಶಿಶುವಿಹಾರಕ್ಕೆ ಬುಧವಾರ ನುಗ್ಗಿದ ದುಷ್ಕರ್ಮಿಯೊಬ್ಬ ಚೂರಿಯಿಂದ ದಾಳಿ ನಡೆಸಿ 3 ಮಂದಿಯನ್ನು ಹತ್ಯೆಗೈದಿದ್ದು 6 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜಿಯಾಂಗ್‌ಕ್ಸಿಯ ಅನ್ಫು ನಗರದ ಖಾಸಗಿ ಶಿಶುವಿಹಾರಕ್ಕೆ ಬುಧವಾರ ಬೆಳಿಗ್ಗೆ 10 ಗಂಟೆಗೆ( ಸ್ಥಳೀಯ ಕಾಲಮಾನ) ಕ್ಯಾಪ್ ಮತ್ತು ಮಾಸ್ಕ್ ಧರಿಸಿದ್ದ ದುಷ್ಕರ್ಮಿಯೊಬ್ಬ ನುಗ್ಗಿದ್ದು ಎದುರಿಗೆ ಸಿಕ್ಕವರನ್ನು ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ಗಾಯಗೊಂಡ ಅಥವಾ ಮೃತಪಟ್ಟವರ ವಯಸ್ಸು ಅಥವಾ ಹೆಸರಿನ ಬಗ್ಗೆ ಪೊಲೀಸರು ವಿವರ ಬಹಿರಂಗಪಡಿಸಿಲ್ಲ. ಆದರೆ ದುಷ್ಕರ್ಮಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗಾಯಗೊಂಡ ಮಗುವೊಂದನ್ನು ಪೊಲೀಸ್ ಅಧಿಕಾರಿಯೊಬ್ಬ ಕೈಯಲ್ಲಿ ಎತ್ತಿಕೊಂಡು ಆಂಬ್ಯುಲೆನ್ಸ್‌ನತ್ತ ಧಾವಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News