×
Ad

ದೇಶದ ಸಾರ್ವಭೌಮತ್ವದ ಗಂಭೀರ ಉಲ್ಲಂಘನೆ: ತೈವಾನ್ ವಿದೇಶಾಂಗ ಇಲಾಖೆ

Update: 2022-08-03 21:25 IST

ತೈಪೆ, ಆ.3: ತೈವಾನ್ ಜಲಸಂಧಿಯ ಬಳಿ ಚೀನಾದ ಯುದ್ಧವಿಮಾನಗಳ ಹಾರಾಟವು ವಿಶ್ವಸಂಸ್ಥೆಯ ಕಾನೂನನ್ನು ಉಲ್ಲಂಘಿಸಿದ್ದು ಇದು ದೇಶದ ಸಾರ್ವಭೌಮತೆಯ ಗಂಭೀರ ಉಲ್ಲಂಘನೆಯಾಗಿದೆ ಎಂದು ತೈವಾನ್‌ನ ರಕ್ಷಣಾ ಇಲಾಖೆ ಬುಧವಾರ ಹೇಳಿದೆ. 

ತೈವಾನ್‌ನ ಪ್ರಾದೇಶಿಕ ವ್ಯಾಪ್ತಿಯ ಒಳಗೆ ಪ್ರವೇಶಿಸಿದ ಚೀನಾದ ಯುದ್ಧವಿಮಾನಗಳು ವಾಯುರಕ್ಷಣಾ ವಲಯವನ್ನು ಆಕ್ರಮಿಸಿಕೊಂಡಿರುವುದು ದೇಶದ ವಾಯು ಮತ್ತು ಜಲಪ್ರದೇಶಕ್ಕೆ ದಿಗ್ಬಂಧನ ವಿಧಿಸಿದಂತಾಗಿದೆ. ದ್ವೀಪರಾಷ್ಟ್ರವು ತನ್ನ ಭದ್ರತೆಯನ್ನು ದೃಢವಾಗಿ ರಕ್ಷಿಸುತ್ತದೆ, ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಯಾವುದೇ ಕ್ರಮವನ್ನು ಎದುರಿಸುತ್ತದೆ ಮತ್ತು ನಾವಾಗಿ ಯುದ್ಧಕ್ಕೆ ಮುಂದಾಗುವುದಿಲ್ಲ ಎಂಬ ತತ್ವವನ್ನು ಪಾಲಿಸುತ್ತದೆ.

 ಜತೆಗೆ ಎಚ್ಚರಿಕೆಯ ಮಟ್ಟವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ತೈವಾನ್‌ನ ರಕ್ಷಣಾ ಇಲಾಖೆ ಹೇಳಿದೆ. ಚೀನಾವು ತೈವಾನ್‌ನ ಮೇಲೆ ಮಾನಸಿಕ ಯುದ್ಧವನ್ನು ಮುಂದುವರಿಸಿದೆ. ನಾಗರಿಕರು ವದಂತಿಗಳನ್ನು ನಂಬಬಾರದು ಮತ್ತು ಯಾವುದೇ ನಕಲಿ ಸುದ್ಧಿಗಳನ್ನು ಸರಕಾರಕ್ಕೆ ವರದಿ ಮಾಡಬಾರದು ಎಂದು ಬುಧವಾರ ನಡೆಸಿದ್ದ ಸುದ್ದಿಗೋಷ್ಟಿಯಲ್ಲಿ ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News