ಗುಜರಾತ್‍: ದಲಿತ ಮಹಿಳೆ ತಯಾರಿಸಿದ ಬಿಸಿಯೂಟ ನಿರಾಕರಿಸುತ್ತಿರುವ ವಿದ್ಯಾರ್ಥಿಗಳು!

Update: 2022-08-04 14:59 GMT

ಹೊಸದಿಲ್ಲಿ: ಗುಜರಾತ್‍ (Gujarat)ನ ಮೊರ್ಬಿ ಜಿಲ್ಲೆಯ ಶ್ರೀ ಸೊಖ್ದ ಪ್ರಾಥಮಿಕ ಶಾಲೆಯ 153 ವಿದ್ಯಾರ್ಥಿಗಳ ಪೈಕಿ 147 ಇತರ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಶಾಲೆಯ ಬಿಸಿಯೂಟ(Midday Meals)ವನ್ನು ದಲಿತ(Dalit) ಮಹಿಳೆಯೊಬ್ಬರು ತಯಾರಿಸುತ್ತಿದ್ದಾರೆಂಬ ಕಾರಣಕ್ಕೆ ಕಳೆದ ಹಲವಾರು ದಿನಗಳಿಂದ ಊಟ ಮಾಡಲು ನಿರಾಕರಿಸುತ್ತಿದ್ದಾರೆ ಎಂದು thewire.in ವರದಿ ಮಾಡಿದೆ.

ಧಾರ ಮಕ್ವಾನ ಎಂಬ ದಲಿತ ಮಹಿಳೆ ತಯಾರಿಸಿದ ಊಟವನ್ನು ತಮ್ಮ ಮಕ್ಕಳು ಮಾಡುವುದಕ್ಕೆ ವಿದ್ಯಾರ್ಥಿಗಳ ಹೆತ್ತವರು ಆಕ್ಷೇಪಿಸಿದ್ದಾರೆ ಎಂದು ಮೊರ್ಬಿ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಜೂನ್ ತಿಂಗಳಿನಲ್ಲಿ ಈ ಮಹಿಳೆಗೆ ಆಹಾರ ತಯಾರಿಸುವ ಗುತ್ತಿಗೆ ವಹಿಸಲಾಗಿತ್ತು. ವಿದ್ಯಾರ್ಥಿಗಳು ಊಟ ಮಾಡದೇ ಇರುವುದರಿಂದ ಸಾಕಷ್ಟು ಆಹಾರ ಪೋಲಾಗುತ್ತಿದೆ ಎಂದು ದೂರಲಾಗಿದೆ.

ಇದನ್ನೂ ಓದಿ: 1400 ಕೋಟಿ ರೂ. ಮೌಲ್ಯದ 700 ಕೆಜಿ ಡ್ರಗ್ಸ್‌ ಪತ್ತೆ

ಮಹಿಳೆಯ ಪತಿ ಗೋಪಿ ಎಂಬವರು ಪೊಲೀಸ್ ದೂರು ನೀಡಿದ್ದರೂ ಇದು ಶಾಲಾಡಳಿತ ಮತ್ತು ಜಿಲ್ಲಾಡಳಿತದ ವಿಚಾರವಾಗಿರುವುದರಿಂದ ತಾವು ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆನ್ನಲಾಗಿದೆ.

ಶಾಲಾ ಮಕ್ಕಳ ಹೆತ್ತವರ ಜೊತೆಗೆ ಎರಡು ಸುತ್ತಿನ ಮಾತುಕತೆಗಳು ವಿಫಲವಾಗಿವೆ, ಜಾತೀಯತೆಯನ್ನು ಮರೆತು ಎಲ್ಲರೂ ಒಗ್ಗಟ್ಟಿನಿಂದಿರಬೇಕೆಂಬ ಮನವಿಯೂ ಫಲ ನೀಡಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News