ಶಿವಸೇನೆ ನಾಯಕ ಸಂಜಯ್ ರಾವುತ್ ಪತ್ನಿಗೆ ಈ.ಡಿ. ಸಮನ್ಸ್

Update: 2022-08-04 17:47 GMT

ಹೊಸದಿಲ್ಲಿ, ಆ. 4: ಭೂ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಶಿವಸೇನೆಯ ಬಂಧಿತ ಸಂಸದ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವುತ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಮುಂಬೈಯ ವಿಶೇಷ ನ್ಯಾಯಾಲಯ ಸಂಜಯ್ ರಾವುತ್ ಅವರ ಜಾರಿ ನಿರ್ದೇಶನಾಲಯದ ಕಸ್ಟಡಿಯನ್ನು ಆಗಸ್ಟ್ 8ರ ವರೆಗೆ ವಿಸ್ತರಿಸಿದ ಗಂಟೆಗಳ ಬಳಿಕ ಈ ಬೆಳವಣಿಗೆ ನಡೆದಿದೆ. ವರ್ಷಾ ರಾವುತ್ ಅವರ ಹೆಸರನ್ನು ಜಾರಿ ನಿರ್ದೇಶನಾಲಯ ಪದೇ ಪದೇ ಉಲ್ಲೇಖಿಸಿದೆ. ಅವರ ಕೆಲವು ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆದರೆ, ಅವರನ್ನು ಇದುವರೆಗೆ ವಿಚಾರಣೆಗೆ ಒಳಪಡಿಸಿಲ್ಲ.

ಜಾರಿ ನಿರ್ದೇಶನಾಲಯ ನಾಲ್ಕು ತಿಂಗಳ ಹಿಂದೆ 11 ಕೋ.ರೂ. ಮೌಲ್ಯದ ವರ್ಷಾ ರಾವುತ್ ಹಾಗೂ ಸಂಜಯ್ ರಾವುತ್ ಅವರ ಇಬ್ಬರು ಸಹವರ್ತಿಗಳ ಸೊತ್ತನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News