ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲದಲ್ಲಿ ಸನಾತನ ಧರ್ಮದ ಸ್ನಾತಕೋತ್ತರ ಕೋರ್ಸ್

Update: 2022-08-04 18:14 GMT
Photo credit: https://www.amu.ac.in/ 

ಲಕ್ನೋ, ಆ. 4: ಮುಂದಿನ ಶೈಕ್ಷಣಿಕ ವರ್ಷದಿಂದ ಇಸ್ಲಾಮಿಕ್ ಅಧ್ಯಯನ ವಿಭಾಗದಲ್ಲಿ ಇತರ ಧರ್ಮಗಳೊಂದಿಗೆ ಸನಾತನ ಧರ್ಮದ ಕೋರ್ಸ್ ಅನ್ನು ಆರಂಭಿಸಲು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಇಸ್ಲಾಮಿಕ್ ಅಧ್ಯಯನ ವಿಭಾಗದ ಪಠ್ಯಕ್ರಮದಿಂದ ಪಾಕಿಸ್ತಾನದ ಅಬುಲ್ ಅಲಾ ಮೌದೂದಿ ಹಾಗೂ ಈಜಿಪ್ಟ್‌ನ ಸಯೀದ್ ಕುತುಬ್ ಅವರ ಎರಡು ಪುಸ್ತಕಗಳನ್ನು ತೆಗೆದು ಹಾಕಿದ ಕೆಲವು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. 

ಪ್ರಸ್ತುತ ಇಸ್ಲಾಮಿಕ್ ಅಧ್ಯಯನಕ್ಕೆ ಸಂಬಂಧಿಸಿದ ಕೋರ್ಸ್ ಅನ್ನು ಮಾತ್ರ ಹೊಂದಿರುವ ವಿಶ್ವವಿದ್ಯಾನಿಲಯ ಧರ್ಮಗಳ ತುಲನಾತ್ಮಕ ಅಧ್ಯಯನದ ಸ್ನಾತಕೋತ್ತರ ಕೋರ್ಸ್ ಅನ್ನು ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ. ಉನ್ನತ ಶಿಕ್ಷಣವನ್ನು ಬಯಸಿ ಇಲ್ಲಿಗೆ ಆಗಮಿಸುವ ಎಲ್ಲ ಧರ್ಮ, ನಂಬಿಕೆ, ಭಾಷೆಯ ವಿದ್ಯಾರ್ಥಿಗಳನ್ನು ಒಳಗೊಂಡ ವಿಶ್ವವಿದ್ಯಾನಿಲಯ ಎಎಂಯು ಆಗಿದೆ ಎಂದು ಎಎಂಯು ಸಾರ್ವಜನಿಕ ಸಂಪರ್ಕ ಅಧಿಕಾರಿ ಉಮರ್ ಸಲೀಂ ಫೀರ್‌ಝಾದ ಅವರು ತಿಳಿಸಿದ್ದಾರೆ.

ಇಸ್ಲಾಮಿಕ್ ಅಧ್ಯಯನ ವಿಭಾಗದಲ್ಲಿ ಸನಾತನ ಧರ್ಮ ಅಧ್ಯಯನದಲ್ಲಿ ಎಂಎ ಕೋರ್ಸ್ ಅನ್ನು ಆರಂಭಿಸಲು ನಾವು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಈ ಕೋರ್ಸ್‌ನಲ್ಲಿ ಜೈನಧರ್ಮ, ಬೌದ್ಧ ಧರ್ಮ, ಸಿಖ್ಖ್ ಧರ್ಮ ಹಾಗೂ ಇತರ ಧರ್ಮಗಳೊಂದಿಗೆ ವೇದ, ಪುರಾಣ, ಉಪನಿಷತ್, ರಾಮಾಯಣ ಭಗವದ್ಗೀತೆಯ ಪಠ್ಯಗಳು ಇರಲಿವೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News