ರೆಪೊ ದರವನ್ನು ಶೇ. 0.50ರಷ್ಟು ಹೆಚ್ಚಿಸಿದ ಆರ್ ಬಿಐ

Update: 2022-08-05 05:54 GMT

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ ((RBI)ಶುಕ್ರವಾರ ತನ್ನ ಪ್ರಮುಖ ಸಾಲದ ದರವನ್ನು 50 ಬೇಸಿಸ್ ಪಾಯಿಂಟ್‌ ಹೆಚ್ಚಿಸಿದೆ. ಇದರೊಂದಿಗೆ ರೆಪೋ ದರ ಈಗ  5.40 ಶೇಕಡಾಕ್ಕೆ ತಲುಪಿದೆ. 2019ರ ಬಳಿಕ ಇಷ್ಟೊಂದು ಏರಿಕೆ ಆಗಿದೆ.

ಏರುತ್ತಿರುವ ಹಣದುಬ್ಬರವನ್ನು ಪಳಗಿಸಲುಆರ್ ಬಿಐ  ಸತತ ಮೂರನೇ ಬಾರಿ ರೆಪೋ ದರ ಹೆಚ್ಚಳ ಮಾಡಲಾಗಿದೆ.

ಜೂನ್ ಚಿಲ್ಲರೆ ಹಣದುಬ್ಬರವು ಶೇಕಡಾ 7 ರಷ್ಟಿದ್ದು, ಆರ್‌ಬಿಐನ 2-6 ಶೇಕಡಾ ಮಧ್ಯಮ ಅವಧಿಯ ಗುರಿಗಿಂತ ಹೆಚ್ಚಿನದಾಗಿದೆ. ವಿತ್ತೀಯ ನೀತಿ ಸಮಿತಿ (ಎಂಪಿಸಿ) ಪ್ರಮುಖ ಸಾಲದ ದರ ಅಥವಾ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್‌ ಹೆಚ್ಚಳ  ಮಾಡಲಾಗಿದ್ದು ರೆಪೊ ದರ ಶೇ. 5.40 ಕ್ಕೆ ಏರಿಕೆಯಾಗಿದೆ. ಇದು  2019 ರಿಂದ ಅತಿ ಹೆಚ್ಚು ರೆಪೊ ದರವಾಗಿದೆ.

ಇತ್ತೀಚಿನ ಏರಿಕೆಯೊಂದಿಗೆ, ರೆಪೊ ದರವು ಸಾಂಕ್ರಾಮಿಕ ಪೂರ್ವದ ಶೇಕಡಾ 5.15 ಅನ್ನು ದಾಟಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (RBI Governor Shaktikanta Das)ನೇತೃತ್ವದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಎಲ್ಲಾ ಆರು ಸದಸ್ಯರು ದರ ಏರಿಕೆಗೆ ಒಮ್ಮತದ ಸಮ್ಮತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News