ಇಂದು ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ, ನಾಲ್ಕು ಜನರ ಸರ್ವಾಧಿಕಾರವಿದೆ: ರಾಹುಲ್ ಗಾಂಧಿ

Update: 2022-08-05 06:15 GMT
Photo:PTI

ಹೊಸದಿಲ್ಲಿ: ಪ್ರತಿಪಕ್ಷ ನಾಯಕರ ವಿರುದ್ಧ ಪ್ರತಿಯೊಂದು  ಕೇಂದ್ರೀಯ ಸಂಸ್ಥೆಗಳನ್ನು ನರೇಂದ್ರ ಮೋದಿ ಸರಕಾರ  ನಡೆಸಿಕೊಳ್ಳುತ್ತಿರುವ ರೀತಿ ಭಾರತವು ಸರ್ವಾಧಿಕಾರದ ಆರಂಭವನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

"ಈ ಸರಕಾರದ ವಿರುದ್ಧ ಮಾತನಾಡುವವರ ಮೇಲೆ ಕೆಟ್ಟದಾಗಿ ದಾಳಿ ಮಾಡುತ್ತಾರೆ, ಜೈಲಿಗೆ ಹಾಕುತ್ತಾರೆ.  ಜನರ ಸಮಸ್ಯೆಗಳನ್ನು ಎತ್ತಲು ಬಿಡುತ್ತಿಲ್ಲ. ಇಂದು ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ, ನಾಲ್ಕು ಜನರ ಸರ್ವಾಧಿಕಾರವಿದೆ" ಎಂದು ರಾಹುಲ್ ಹೇಳಿದರು.

ಏಳು ದಶಕಗಳಲ್ಲಿ ನಾವು  ಒಂದೊಂದೆ ಇಟ್ಟಿಗೆ ಜೋಡಿಸಿ  ಸೃಷ್ಟಿಸಿದ್ದನ್ನು ಕೇವಲ ಐದು ವರ್ಷಗಳಲ್ಲಿ ನಾಶಪಡಿಸಲಾಗಿದೆ. ನಾವು ಭಾರತೀಯ ಪ್ರಜಾಪ್ರಭುತ್ವದ ಸಾವನ್ನು ನೋಡುತ್ತಿದ್ದೇವೆ. ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಈ ಸರಕಾರದ ಏಕೈಕ ಅಜೆಂಡಾವಾಗಿದೆ " ಎಂದು ರಾಹುಲ್  ಗಾಂಧಿ ಹೇಳಿದರು.

ಏರುತ್ತಿರುವ ಬೆಲೆಗಳು, ನಿರುದ್ಯೋಗ ಹಾಗೂ ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್ಟಿ ದರ ಏರಿಕೆ ವಿರುದ್ಧ ಕಾಂಗ್ರೆಸ್ ಶುಕ್ರವಾರ  ಪ್ರತಿಭಟನೆ ನಡೆಸಿತು. ಪಕ್ಷದ ನಾಯಕರು ದಿಲ್ಲಿಯ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ನಡೆಸಲು ಯೋಜಿಸಿದ್ದಾರೆ.  ಕಾಂಗ್ರೆಸ್‌ನ ರಾಜ್ಯ ಘಟಕಗಳು ದೇಶಾದ್ಯಂತ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News