ಬಿಹಾರ: ವಿಷಪೂರಿತ ನಕಲಿ ಮದ್ಯ ಸೇವನೆಯಿಂದ ಒಂಭತ್ತು ಜನರ ಸಾವು, 17 ಜನರಿಗೆ ಅಂಧತ್ವ

Update: 2022-08-05 17:19 GMT

ಪಾಟ್ನಾ,ಆ.5: ಬಿಹಾರದ ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯವನ್ನು ಸೇವಿಸಿ ಒಂಭತ್ತು ಜನರು ಮೃತಪಟ್ಟಿದ್ದು,ಇತರ 17 ಜನರು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ.

ಬಿಹಾರದಲ್ಲಿ ಎಪ್ರಿಲ್ 2016ರಿಂದ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆಯಾದರೂ,ರಾಜ್ಯದಲ್ಲಿ ನಕಲಿ ಮದ್ಯ ಸೇವಿಸಿ ಜನರು ಸಾವನ್ನಪ್ಪುವ ಮತ್ತು ಅಸ್ವಸ್ಥಗೊಳ್ಳುವ ಘಟನೆಗಳು ವರದಿಯಾಗುತ್ತಲೇ ಇವೆ.

ನಕಲಿ ಮದ್ಯವನ್ನು ಸೇವಿಸಿದ್ದ ನತದೃಷ್ಟರಲ್ಲಿ ಹೆಚ್ಚಿನವರು ಮಾಕೆರ್ ಮತ್ತು ಭೆಲ್ಡಿ ಪೊಲೀಸ್ ಠಾಣಾ ವ್ಯಾಪ್ತಿಗಳ ವಿವಿಧ ಗ್ರಾಮಗಳಿಗೆ ಸೇರಿದ್ದು, ಇವರೆಲ್ಲ ಧನುಕಾ ಟೋಲಿ ಗ್ರಾಮದಲ್ಲಿ ಈ ನಕಲಿ ಮದ್ಯವನ್ನು ಖರೀದಿಸಿದ್ದರು ಎನ್ನಲಾಗಿದೆ.

ಪ್ರಸ್ತುತ ಛಾಪ್ರಾದ ಸದರ ಆಸ್ಪತೆಯಲ್ಲಿ 11 ಜನರು ಚಿಕಿತ್ಸೆ ಪಡೆಯುತ್ತಿದ್ದು,ಇತರ ಹಲವರು ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪ್ಪತ್ರೆಗೆ ದಾಖಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News