ಕಾಮನ್‌ವೆಲ್ತ್ ಗೇಮ್ಸ್‌: ಕುಸ್ತಿಪಟು ಬಜರಂಗ್ ಪುನಿಯಾಗೆ ಹ್ಯಾಟ್ರಿಕ್ ಚಿನ್ನ

Update: 2022-08-05 17:58 GMT

ಬರ್ಮಿಂಗ್‌ಹ್ಯಾಮ್, ಆ.5: ಭಾರತದ ಸ್ಟಾರ್ ಕುಸ್ತಿಪಟು,ಹಾಲಿ ಚಾಂಪಿಯನ್ ಬಜರಂಗ್ ಪುನಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹ್ಯಾಟ್ರಿಕ್ ಚಿನ್ನ ಜಯಿಸಿದರು.

ಶುಕ್ರವಾರ ನಡೆದ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದ ಫೈನಲ್‌ನಲ್ಲಿ ಪುನಿಯಾ ಅವರು ಕೆನಡಾದ ಲಚ್ಲನ್ ಮೆಕ್‌ನಿಲ್‌ರನ್ನು 9-2 ಅಂತರದಿಂದ ಮಣಿಸಿದರು. ಇದರೊಂದಿಗೆ ಸತತ 3ನೇ ಚಿನ್ನ ಜಯಿಸಿದರು. ಇಂಗ್ಲೆಂಡ್‌ನ ಜಾರ್ಜ್ ರ್ಯಾಮ್‌ರನ್ನು ಮಣಿಸಿದ ಬಜರಂಗ್ ಪುನಿಯಾ ಫೈನಲ್‌ಗೆ ಪ್ರವೇಶಿಸಿದ್ದರು. ಭಾರತವು ಪ್ರಸ್ತುತ ಗೇಮ್ಸ್‌ನಲ್ಲಿ 9ನೇ ಹಾಗೂ ಕುಸ್ತಿಯಲ್ಲಿ ಮೊದಲ ಚಿನ್ನ ಜಯಿಸಿದೆ. 

ಅನ್ಶು ಮಲಿಕ್ ಮಹಿಳೆಯರ ಫ್ರೀಸ್ಟೈಲ್ 57 ಕೆಜಿ ಫೈನಲ್‌ನಲ್ಲಿ ನೈಜೀರಿಯದ ಒಡುನಾಯೊ ವಿರುದ್ಧ 3-7 ಅಂತರದಿಂದ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಅನ್ಶು ಸೆಮಿ ಫೈನಲ್‌ನಲ್ಲಿ ಶ್ರೀಲಂಕಾದ ನೆತ್ಮಿ ಪೊರುತೋಟಗೆ ಅವರನ್ನು 10-0 ಅಂತರದಿಂದ(ತಾಂತ್ರಿಕ ಶ್ರೇಷ್ಠತೆ)10-0 ಅಂತರದಿಂದ ಸೋಲಿಸಿದ್ದರು.

ದೀಪಕ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಕೂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News