ಆಗಸ್ಟ್ 7ರಂದು ಮೋದಿ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಆಡಳಿತ ಮಂಡಳಿ ಸಭೆ

Update: 2022-08-05 18:19 GMT

ಹೊಸದಿಲ್ಲಿ, ಆ. 5: ಆಗಸ್ಟ್ 7ರಂದು ನಡೆಯಲಿರುವ ನೀತಿ ಆಯೋಗದ ಆಡಳಿತ ಮಂಡಳಿಯ 7ನೇ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. 

ಈ ಸಭೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳ ನಡುವೆ ಸಹಯೋಗದ ಹೊಸ ಯುಗಕ್ಕೆ ನಾಂದಿ ಹಾಡಲಿದೆ. 2019 ಜುಲೈ 19ರ ಬಳಿಕ ನಡೆಯುತ್ತಿರುವ ಮೊದಲ ಭೌತಿಕ ಸಭೆ ಇದಾಗಿದೆ. ಇದರ ಸದಸ್ಯರಲ್ಲಿ ಎಲ್ಲ ಮುಖ್ಯಮಂತ್ರಿಗಳು ಸೇರಿದ್ದಾರೆ.  
ದೇಶ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭ ರಾಜ್ಯಗಳು ಚುರುಕಾಗುವ, ಚೇತರಿಸಿಕೊಳ್ಳುವ,ಸ್ವಾವಲಂಬನೆ ಹಾಗೂ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯೊಂದಿಗೆ ‘ಅತ್ಮ ನಿರ್ಭರ’ದತ್ತ ಸಾಗುವ ಅಗತ್ಯತೆ ಇದೆ ಎಂದು ಪ್ರಧಾನ ಮಂತ್ರಿ ಅವರ ಕಚೇರಿ ತಿಳಿಸಿದೆ. 

ಸ್ಥಿರ, ಸುಸ್ಥಿರ ಹಾಗೂ ಅಂತರ್ಗತ ಭಾರತವನ್ನು ರೂಪಿಸುವ ಅಭಿಯಾನದ ಹಿನ್ನೆಲೆಯಲ್ಲಿ ನೀತಿ ಆಯೋಗದ ಆಡಳಿತ ಮಂಡಳಿಯ 7ನೇ ಸಭೆ ಆಗಸ್ಟ್ 7ರಂದು ಆಯೋಜಿಸಲಾಗಿದೆ. ಕೇಂದ್ರ ಹಾಗೂ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ನಡುವಿನ ಸಹಭಾಗಿತ್ವ ಹಾಗೂ ಸಹಯೋಗದ ನೂತನ ಯುಗದತ್ತ ಇದು ದಾರಿ ಮಾಡಿ ಕೊಡಲಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News