ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಕಚೇರಿಗೆ ತೆರಳಿದ ಸಂಜಯ್ ರಾವುತ್ ಪತ್ನಿ ವರ್ಷಾ
Update: 2022-08-06 13:00 IST
ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಮನ್ಸ್ ಸ್ವೀಕರಿಸಿದ ಬಳಿಕ ಬಂಧಿತ ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವುತ್ ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದಾರೆ. ವರ್ಷಾ ಅವರ ಮಗಳು ಹಾಗೂ ಸಂಜಯ್ ಅವರ ಸಹೋದರ ಸನಿಲ್ ರಾವುತ್ ಅವರೊಂದಿಗೆ ಬಂದರು.
ಎರಡು ದಿನಗಳ ಹಿಂದೆ ಮುಂಬೈನ ವಿಶೇಷ ನ್ಯಾಯಾಲಯವು ಸಂಜಯ್ ರಾವುತ್ ಅವರ ಈಡಿ ಕಸ್ಟಡಿಯನ್ನು ಆಗಸ್ಟ್ 8 ರವರೆಗೆ ವಿಸ್ತರಿಸಿದ ಕೆಲವೇ ಗಂಟೆಗಳ ನಂತರ ವಸತಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತನಿಖಾ ಸಂಸ್ಥೆಯಿಂದ ವರ್ಷಾ ರಾವುತ್ ಅವರಿಗೆ ಸಮನ್ಸ್ ನೀಡಲಾಗಿದೆ.
ಕೇಂದ್ರ ತನಿಖಾ ಸಂಸ್ಥೆ ವರ್ಷಾ ರಾವತ್ ಅವರನ್ನು ಪದೇ ಪದೇ ಹೆಸರಿಸಿದೆ. ಆದರೆ ಇಲ್ಲಿಯವರೆಗೆ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ.