ದಿಲ್ಲಿ ಪೊಲೀಸ್‌ ಠಾಣೆಗೆ ನುಗ್ಗಿ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆಗೈದ ಗುಂಪು: ಓರ್ವನ ಬಂಧನ

Update: 2022-08-06 16:22 GMT
Photo: Twitter

ಹೊಸದಿಲ್ಲಿ: ಜನಸಮೂಹವೊಂದು ಹೆಡ್ ಕಾನ್‌ಸ್ಟೆಬಲ್‌ಗೆ ಥಳಿಸಿದ ವಿಡಿಯೋ ಶನಿವಾರದಂದು ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ ಆದ ನಂತರ ದಿಲ್ಲಿ ಪೊಲೀಸರು(Delhi police) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಇತರರನ್ನು ಗುರುತಿಸಲು ಹಾಗೂ ಬಂಧಿಸಲು ತಂಡಗಳನ್ನು ನಿಯೋಜಿಸಿದ್ದಾರೆ ಎಂದು hindustantimes ವರದಿ ಮಾಡಿದೆ. 

ಪ್ರಕಾಶ್ ಎಂದು ಗುರುತಿಸಲಾದ ಪೋಲೀಸ್ ಅನ್ನು 10-15 ಕ್ಕೂ ಹೆಚ್ಚಿನ ಜನರ ಗುಂಪು ಸುತ್ತುವರೆದಿರುವುದು ವೀಡಿಯೊದಲ್ಲಿ ಕಾಣಬಹುದು. ಅವರಲ್ಲಿ ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಘಟನೆಯ ಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. 

ವ್ಯಕ್ತಿಯೊಬ್ಬ ಪ್ರಕಾಶ್ ಅವರ ಕಾಲರ್ ಹಿಡಿದು ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆ ವ್ಯಕ್ತಿ ಪೊಲೀಸ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡುತ್ತಿದ್ದರೂ ಗುಂಪಿನಲ್ಲಿದ್ದ ಯಾರೂ ಆತನನ್ನು ತಡೆಯದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. 

ಜುಲೈ 31 ರಂದು ದಿಲ್ಲಿಯ ಕರ್ಕರ್ಡೂಮಾದಲ್ಲಿ ಮಹಿಳೆಯೊಬ್ಬಳ ಮೇಲೆ ದೈಹಿಕ ಹಲ್ಲೆ ಮಾಡಿ ಚಿನ್ನದ ಸರವನ್ನು ಕಸಿದುಕೊಂಡಿದ್ದಕ್ಕಾಗಿ ಪ್ರಮುಖ ಆರೋಪಿ ಅಜಯ್ ಎಂಬಾತನನ್ನು ಬಂಧಿಸಿ ಆನಂದ್ ವಿಹಾರ್ ಪೊಲೀಸ್ ಠಾಣೆಗೆ ಕರೆತರಲಾಯಿತು. ಠಾಣೆಗೆ ಕರೆತಂದಾಗ ಅಜಯ್ ಕುಡಿದ ಅಮಲಿನಲ್ಲಿದ್ದ. ಶೀಘ್ರದಲ್ಲೇ, ಆತನ ಸಹೋದರ ಸೇರಿದಂತೆ ಆತನ ಸಹಾಯಕರ ಗುಂಪು ಪೊಲೀಸ್ ಠಾಣೆಯನ್ನು ತಲುಪಿದ್ದು, ಅಲ್ಲಿ ಅವರು ಕರ್ತವ್ಯದಲ್ಲಿದ್ದ ಹೆಡ್ ಕಾನ್‌ಸ್ಟೆಬಲ್‌ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಡಿಸಿಪಿ ಶಹದಾರ ಆರ್ ಸತ್ಯಸುಂದರಂ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ. "ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ತಕ್ಷಣ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆ, ಹಲವಾರು ಬಳಕೆದಾರರು ಘಟನೆಯ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ. “ಪೋಲೀಸ್ ಸ್ಟೇಷನಿನಲ್ಲೇ ಈ ಘಟನೆ ನಡೆದಿರುವುದು ವಿಚಿತ್ರ ಮತ್ತು ಆಘಾತಕಾರಿ! ಈ ಸಂದರ್ಭದಲ್ಲಿ ಕೇವಲ ಒಂದು ಪೊಲೀಸರು ಮಾತ್ರ ಠಾಣೆಯಲ್ಲಿ ಇದ್ದರೇ?” ಎಂದು ಟ್ವಿಟರ್ ಬಳಕೆದಾರರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ: ಬೆಟ್ಟದ ತುದಿಯ ಮಂದಿರಕ್ಕೆ ವಿಗ್ರಹಗಳನ್ನು ಸಾಗಿಸಲು ಮುಸ್ಲಿಮರ ನೆರವು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News