ಅತಿವೃಷ್ಟಿಯಿಂದ ಅಪಾರ ಹಾನಿಯುಂಟಾಗಿರುವ ಮೀನುಗಾರರಿಗೆ ತಕ್ಷಣ ಪರಿಹಾರ ನೀಡುವಂತೆ ವೆಲ್ಫೇರ್ ಪಾರ್ಟಿ ಆಗ್ರಹ

Update: 2022-08-08 12:40 GMT

ಭಟ್ಕಳ : ಅತಿವೃಷ್ಟಿಯಿಂದಾಗಿ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿಯಲ್ಲಿ ಮೀನುಗಾರಿಕೆ ದೋಣಿಗಳು ಹಾನಿಗೊಳಗಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದ್ದು ಸರ್ಕಾರ ತಕ್ಷಣವೇ ಪ್ರತಿ ಮೀನುಗಾರರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರಕನ್ನಡ ಜಿಲ್ಲಾ ಸಮಿತಿ ತಹಶಿಲ್ದಾರರಿಗೆ ಆಗ್ರಹಿಸಿದೆ. 

ಈ ಕುರಿತಂತೆ ಸೋಮವಾರ ಜಿಲ್ಲಾ ಸಮಿತಿಯ ನಿಯೋಗವೊಂದು ತಹಸಿಲ್ದಾರರ ಸುಮಂತ್ ಬಿ. ಯವರನ್ನು ಭೇಟಿಯಾಗಿ ಮನವಿ ನೀಡಿದೆ.

ಅತಿವೃಷ್ಟಿಯಿಂದಾಗಿ ಸಂಕಷ್ಟದಲ್ಲಿರುವ ಮೀನುಗಾರ ಕುಟುಂಬ ಭರಿಸಲಾಗದ ನೋವಿನಲ್ಲಿದೆ.  ತಾಲೂಕಾಡಳಿತ ತಕ್ಷಣವೇ ಸ್ಪಂಧಿಸುವುದರ ಮೂಲಕ ಬಡಮೀನುಗಾರರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ಶೇಖ್, ಖಜಾಂಚಿ ಅಬ್ದುಲ್ ಜಬ್ಬಾರ್ ಅಸದಿ, ಮುಖಂಡರಾದ ಫಾರೂಕ್ ಶೇಕ್, ಯುವ ಮುಖಂಡ ಝಹೂರ್ ಲಾಟ್ ಮುಂತಾದವರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News