ಭಾರೀ ಮಳೆ; ಕಾಪು ತಾಲೂಕಿನಲ್ಲಿ ಎರಡು ಮನೆಗಳಿಗೆ ಹಾನಿ

Update: 2022-08-08 15:00 GMT
ಫೈಲ್‌ ಫೋಟೊ 

ಉಡುಪಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ನಿನ್ನೆ ಕಾಪು ತಾಲೂಕಿನಲ್ಲಿ ಎರಡು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಮಟ್ಟು ಗ್ರಾಮದ ಭಾಸ್ಕರ್ ಎಂಬವರ ಮನೆಯ ಮೇಲ್ಚಾವಣಿಗೆ ಮಳೆಯಿಂದ ಭಾಗಶ: ಹಾನಿಯಾದರೆ, ಪಲಿಮಾರು ಗ್ರಾಮದ ವಸಂತಿ ಎಂಬವರ ಮನೆಯೂ ಭಾಗಶ: ಹಾನಿಗೊಂಡಿದೆ.

ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೪೬ಮಿ.ಮೀ.ಮಳೆಯಾಗಿದೆ.  ಕಾರ್ಕಳದಲ್ಲಿ ೬೨.೨ಮಿ.ಮೀ., ಕುಂದಾಪುರದಲ್ಲಿ ೫೧.೮, ಹೆಬ್ರಿಯಲ್ಲಿ ೫೧.೦,  ಬೈಂದೂರಿನಲ್ಲಿ ೪೩.೨, ಕಾಪುವಲ್ಲಿ ೩೪.೯, ಉಡುಪಿಯಲ್ಲಿ ೨೭.೧ ಹಾಗೂ ಬ್ರಹ್ಮಾವರದಲ್ಲಿ ೨೨.೯ಮಿ.ಮೀ. ಮಳೆಯಾಗಿದೆ.

ಎರಡು ದಿನ ಆರೆಂಜ್ ಅಲರ್ಟ್: ಜಿಲ್ಲೆಯಲ್ಲಿ ನಾಳೆಯಿಂದ ಎರಡು ದಿನ ಆರೆಂಜ್ ಅಲರ್ಟ್‌ನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ೧೧೫.೬ಮಿ.ಮೀ. ನಿಂದ ೨೦೪.೪ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ. ಅಲ್ಲಲ್ಲಿ ಗಾಳಿ ಯೊಂದಿಗೆ ಸಿಡಿಲು ಕಾಣಿಸಿಕೊಳ್ಳುವ ಬಗ್ಗೆ ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ. 

ಕರಾವಳಿಯ ತೀರದುದ್ದಕ್ಕೂ ಬಲವಾದ ಗಾಳಿ ಬೀಸುವ ಸಾಧ್ಯತೆ ಇದ್ದು, ಅರಬಿಸಮುದ್ರದಲ್ಲಿ ೩.೫ರಿಂದ ೪.೪ಮೀ. ಎತ್ತರದ ಅಲೆಗಳು ಏಳು ಸಂಭವವಿದೆ. ಹೀಗಾಗಿ ಬುಧವಾರದವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News