2024ರ ಲೋಕಸಭಾ ಚುನಾವಣೆಗೆ ನಿತೀಶ್ ಕುಮಾರ್ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ?

Update: 2022-08-09 16:49 GMT
photo credit- pti

ಮಹಾಮೈತ್ರಿಕೂಟಕ್ಕೆ ನಿತೀಶ್ ಅವರ ಪುನರಾಗಮನವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರನ್ನು ಬಿಂಬಿಸಲಾಗುವುದೆಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ. ಈ ಬಗ್ಗೆ ಸುದ್ದಿಗಾರರು ನಿತೀಶ್ ಕುಮಾರ್ ಅವರನ್ನು ಪ್ರಶ್ನಿಸಿದಾಗ ಅದಕ್ಕವರು ಉತ್ತರಿಸಲು ನಿರಾಕರಿಸಿದರು. ಅವರ ಜೊತೆಗಿದ್ದ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಮಾತನಾಡಿ, ನಿತೀಶ್ ಅವರು ದೇಶದ ಅತ್ಯಂತ ಅನುಭವಿ ಮುಖ್ಯಮಂತ್ರಿ ಎಂಬ ಸತ್ಯವನ್ನು ಅಲ್ಲಗಳೆಯಲಾಗದು ಎಂದರು.

‘‘ಜೆಡಿಯು ವಿರುದ್ಧ ಬಿಜೆಪಿ ಸಂಚುಹೂಡಿರುವುದನ್ನು ಅಡಗಿಸಿಡಲು ಯಾರಿಗೂ ಸಾಧ್ಯವಿಲ್ಲ. ಜೆ.ಪಿ.ನಡ್ಡಾ ಅವರು ಬಿಹಾರ ಭೇಟಿ ನೀಡಿದ ಸಂದರ್ಭ, ಪ್ರಾದೇಶಿಕ ಪಕ್ಷಗಳಿಗೆ ಅಂತ್ಯಹಾಡುವುದಾಗಿ ಹೇಳಿದ್ದರು. ಪ್ರಜಾಪ್ರಭುತ್ವದ ಭದ್ರಕೋಟೆಯಾದ ಬಿಹಾರದಲ್ಲಿ ಇದನ್ನು ಒಪ್ಪಲು ಸಾಧ್ಯವೇ? .ಬಿಜೆಪಿಯು ಯಾವ ಪಕ್ಷದೊಂದಿಗೆ ಮೈತ್ರಿಯನ್ನು ಬೆಳೆಸುವುದೋ ಆ ಪಕ್ಷವನ್ನು ನಾಶಪಡಿಸಿದೆಯೆಂಬುದನ್ನು ಇತಿಹಾಸ ಹೇಳುತ್ತದೆ. ಮಹಾರಾಷ್ಟ್ರ ಹಾಗೂ ಪಂಜಾಬ್ ನಲ್ಲಿ ಹಾಗೆ ಆಗಿರುವುದನ್ನು ನಾವು ಕಂಡಿದ್ದೇವೆ.’’ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News