ಇಂಗ್ಲೆಂಡ್, ವೇಲ್ಸ್ ನಲ್ಲಿ ತಾಪಮಾನ ಗರಿಷ್ಟ ಮಟ್ಟಕ್ಕೆ: ಬ್ರಿಟನ್ ಎಚ್ಚರಿಕೆ

Update: 2022-08-09 17:05 GMT

ಲಂಡನ್, ಆ.9: ಇಂಗ್ಲೆಂಡ್ ಮತ್ತು ವೇಲ್ಸ್ ನ ಹಲವು ಪ್ರದೇಶಗಳಲ್ಲಿ ಉಷ್ಣತೆ ತೀವ್ರ ಮಟ್ಟಕ್ಕೆ ಏರಲಿದೆ ಎಂದು ಬ್ರಿಟನ್ ನ ಹವಾಮಾನ ಇಲಾಖೆ ಹಳದಿ ಎಚ್ಚರಿಕೆಯ ಸಂದೇಶ ನೀಡಿದೆ. ಕೆಂಪು ಎಚ್ಚರಿಕೆಯ ಬಳಿಕದ ಗರಿಷ್ಟ ಎಚ್ಚರಿಕೆ ಸಂಕೇತವಾಗಿರುವ ಹಳದಿ ಎಚ್ಚರಿಕೆಯು ಗುರುವಾರದಿಂದ ರವಿವಾರದವರೆಗೆ ಜಾರಿಯಲ್ಲಿರುತ್ತದೆ. ತೀವ್ರವಾದ ಶಾಖಕ್ಕೆ ಗುರಿಯಾಗುವ ವ್ಯಕ್ತಿಗಳು ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ . ಶುಕ್ರವಾರ ತಾಪಮಾನ 35 ಡಿಗ್ರಿ ಸೆಲ್ಶಿಯಸ್ ಗೆ ತಲುಪಲಿದೆ ಮತ್ತು ಶನಿವಾರ ಕೆಲ ಪ್ರದೇಶಗಳಲ್ಲಿ 36 ಡಿಗ್ರಿ ಸೆಲ್ಶಿಯಸ್ ಗೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಹೇಳಿದೆ.

1935ರ ಜುಲೈಯಲ್ಲಿ ಇಂಗ್ಲೆಂಡಿನಲ್ಲಿ ಮೊದಲ ಬಾರಿಗೆ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ಅನ್ನು ಮೀರಿತ್ತು. ಆ ಬಳಿಕದ ಗರಿಷ್ಟ ತಾಪಮಾನ ಇದಾಗಲಿದ್ದು ಹವಾಮಾನ ಬದಲಾವಣೆ ಸಮಸ್ಯೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮೂಲಗಳು ಹೇಳಿವೆ. ಜುಲೈಯಲ್ಲಿ ಲಂಡನ್ನಲ್ಲಿ ಬೀಸಿದ ಉಷ್ಣ ಅಲೆಯಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿದ್ದು ವಿಮಾನ ನಿಲ್ದಾಣದ ರನ್‌ವೇಗೆ, ರೈಲ್ವೇ ಹಳಿಗೆ ತೀವ್ರ ಹಾನಿಯಾಗಿತ್ತು. ಹಲವೆಡೆ ಬೆಂಕಿ ದುರಂತವೂ ಸಂಭವಿಸಿತ್ತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News