​ನಿಶಿತಾ ಜೆವಿಟಾ ಡಿಸೋಜಾಗೆ ಡಾಕ್ಟರೇಟ್

Update: 2022-08-09 17:15 GMT

ಉಡುಪಿ, ಆ.9: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮೂಲಕ ಬ್ರಹ್ಮಾವರದ ನಿಶಿತಾ ಜೆವಿಟಾ ಡಿಸೋಜಾ ಅವರು ಮಂಡಿಸಿದ ‘ಕರ್ನಾಟಕದ ನದಿ ಅಳಿವೆ ಮಡ್ಡಿದಿಂಡುಗಳಲ್ಲಿರುವ ಭೂರಾಸಾಯನಿಕ ಹಾಗೂ ಐಸೊಟೋಪ್‌ಗಳ ಮುಖಾಂತರ ಗತಕಾಲದ ಜಲಮಾಲಿನ್ಯದ ಅಧ್ಯಯನ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಡಾಕ್ಟರೇಟ್ ಪದವಿಯನ್ನು ಘೋಷಿಸಿದೆ.

ನಿಶಿತಾ ಅವರ ಸಂಶೋಧನೆಯು ಕರ್ನಾಟಕದ ಸೀತಾ, ಸ್ವರ್ಣ, ಶರಾವತಿ ಹಾಗೂ ಕಾಳಿನದಿಗಳಲ್ಲಿ ಆಗುತ್ತಿರುವ ಜಲಮಾಲಿನ್ಯದ ಕುರಿತಾಗಿದ್ದು, ಕೇಂದ್ರ ಹಾಗೂ ರಾಜ್ಯಸರಕಾರಗಳ ಪರಿಸರ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಶೋಧಕರಿಗೆ ಉಪಯುಕ್ತವಾಗಿದೆ. ಇವರು ಸಿದ್ಥಪಡಿಸಿದ ಪ್ರಬಂಧದ ಕೆಲವು ಲೇಖನಗಳು ಪ್ರಪಂಚದ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.

ಎಂಐಟಿಯ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಎಚ್.ಎನ್.ಉದಯಶಂಕರ್ ಅವರ ಮಾರ್ಗದರ್ಶನದಲ್ಲಿ ನಿಶಿತಾ ತಮ್ಮ ಸಂಶೋಧನೆಯನ್ನು ಕೈಗೊಂಡಿದ್ದರು. ಇವರು ಬೆಂಗಳೂರಿನ ರವಿಪ್ರಕಾಶ್ ಹಾಗೂ ಕಮಲಾ ದಂಪತಿಗ ಪುತ್ರಿ ಹಾಗೂ ಬ್ರಹ್ಮಾವರದ ಸಿವಿಲ್ ಇಂಜಿನಿಯರ್ ನವೀನ್ ಡಿಸೋಜ ಅವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News