ಸ್ವಾತಂತ್ರ್ಯದ ಅಮೃತ ಮಹೋತ್ಸವ; ದಕ್ಷಿಣ ಬ್ಲಾಕ್ ಕಾಂಗ್ರೆಸ್ ಕಾಲ್ನಡಿಗೆ ಜಾಥ ಆರಂಭ

Update: 2022-08-10 08:32 GMT

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್  ಸಮಿತಿ ವತಿಯಿಂದ ಕಾಲ್ನಡಿಗೆ ಜಾಥವು ನಗರದ ಪಾಂಡೇಶ್ವರ ನೆಹರೂ ಪ್ರತಿಮೆಯ ಬಳಿಯಿಂದ ಆರಂಭ ಗೊಂಡು ನಗರದ ಲಾಲ್ ಭಾಗ್ ಬಳಿ ಸಮಾರೋಪ ಗೊಂಡಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ.ಉದಯ ಕುಮಾರ್ ಇರ್ವತ್ತೂರು ಮಾತನಾಡುತ್ತಾ, ದೇಶದ ಸ್ವಾತಂತ್ರ್ಯಕ್ಕಾಗಿ ಕಾರ್ನಾಡ್ ಸದಾಶಿವ ರಾಯರಂತಹ ನಮ್ಮ ನಾಡಿನ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ಬಲಿದಾನವನ್ನು  ನೆನಪಿಸಿಕೊಳ್ಳಬೇಕಾಗಿದೆ. ನಮ್ಮ ಹಿರಿಯರ ಮೂಲಕ ನಾವು ಪಡೆದ ಸ್ವಾತಂತ್ರ್ಯದ ಬೆಲೆ ಕೂಡ ಏರುತ್ತಿದೆ. ರಾಜಕೀಯ ಪಕ್ಷಗಳು ಜನರ ಸಂಕಟ, ನೋವುಗಳಿಗೆ ಧ್ವನಿ ಯಾಗಬೇಕಾ ಗಿದೆ ಎಂದು ಅವರು ತಿಳಿಸಿದರು.

ಮಾಜಿ ಶಾಸಕ ಜೆ.ಆರ್.ಲೋಬೊ ಈ ಸಂದರ್ಭ ಮಾತನಾಡಿದರು.

ಐವನ್ ಡಿಸೋಜಾ, ಪಿ.ವಿ ಮೋಹನ್, ಜಿ.ಎ.ಬಾವ,ಕೆಪಿಸಿಸಿ ಕಾರ್ಯ ದರ್ಶಿ ಮಿಥುನ್ ರೈ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಂ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ನವೀನ್ ಡಿ ಸೋಜ, ಪ್ರವೀಣ್ ಚಂದ್ರ ಆಳ್ವ, ಲ್ಯಾನ್ಸಿ ಎಲ್ ಪಿಂಟೋ, ಕಾಂಗ್ರೆಸ್ ಪದಾಧಿಕಾರಿಗಳಾದ ಶಾಲೆಟ್ ಪಿಂಟೋ, ಶಾಹುಲ್ ಹಮೀದ್, ವಿಶ್ವಾಸ್ ದಾಸ್, ಟಿ.ಕೆ.ಸುಧೀರ್, ಶುಭೋದಯ ಆಳ್ವ, ಶಶಿಕಲಾ, ಜೋಕಿಂ ಡಿಸೋಜ, ಮುಹಮ್ಮದ್ ಹುಸೈನ್, ಉಮೇಶ್ ದಂಡಕೇರಿ, ಅಪ್ಪಿ, ದುರ್ಗಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.‌

ಸೇವಾ ದಳದ ಪದಾಧಿ ಕಾರಿಗಳು ರಾಷ್ಟ ಧ್ವಜ, ಗಾಂಧಿ ಟೋಪಿ, ಸಮವಸ್ತ್ರ ದೊಂದಿಗೆ ಮೆರವಣಿಗೆ ಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News