ಅಗತ್ಯವಿದ್ದಲ್ಲಿ ತೈವಾನ್ ಸ್ವಾಧೀನಕ್ಕೆ ಸೇನಾ ಬಲ ಪ್ರಯೋಗಕ್ಕೂ ಸಿದ್ಧ: ಚೀನಾ ಎಚ್ಚರಿಕೆ

Update: 2022-08-10 16:14 GMT

ಹೊಸದಿಲ್ಲಿ,ಆ.10: ತೈವಾನ್ ಅನ್ನು ಸ್ವಾಧೀನಪಡಿಸಲು ಅಗತ್ಯಬಿದ್ದಲ್ಲಿ ತಾನು ಮಿಲಿಟರಿ ಬಲಪ್ರಯೋಗಕ್ಕೂ ಹೇಸುವುದಿಲ್ಲವೆಂದು ಚೀನಾ ಬುಧವಾರ ಪುನರುಚ್ಚರಿಸಿದೆ. ದ್ವೀಪಪ್ರದೇಶದವಾದ ತೈವಾನ್ನ ಸಮೀ ಪ ಚೀನಾ ಸೇನಾ ಸಮರಾಭ್ಯಾದ ಬಳಿಕ ಉದ್ವಿಗ್ವಾವಸ್ಥೆಯುಂಟಾಗಿರುವ ಬೆನ್ನಲ್ಲೇ ಅದು ಈ ಎಚ್ಚರಿಕೆಯನ್ನು ನೀಡಿದೆ.

 ಚೀನಾ ಸಂಪುಟದ ತೈವಾನ್ ವ್ಯವಹಾರ ಕಾರ್ಯಾಲಯ ಹಾಗೂ ಅದರ ಸುದ್ದಿ ವಿಭಾಗವು ಈ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ. ದ್ವೀಪಪ್ರದೇಶವಾದ ತೈವಾನ್ ತನ್ನ ಭೂಭೂಗವೆಂದು ಚೀನಾ ಪ್ರತಿಪಾದಿಸುತ್ತಲೇ ಬಂದಿದೆ.

  

ತನ್ನೊಂದಿಗೆ ತೈವಾನ್ ಶಾಂತಿಯುತವಾಗಿ ಏಕೀಕರಣಗೊಳ್ಳುವುದನ್ನು ತಾನು ಬಯಸುವುದಾಗಿ ಬೀಜಿಂಗ್ ಹೇಳಿದೆ. ಆದರೆ ಅದರೆ ಅಗತ್ಯ ಬಿದ್ದಲ್ಲಿ ಮಿಲಿಟರಿ ಬಲವನ್ನು ಬಳಸುವುದಿಲ್ಲವೆಂದು ತಾನು ಪ್ರತಿಜ್ಞೆ ಮಾಡಲಾರೆ ಹಾಗೂ ಈ ಸಂಬಂಧ ಅಗತ್ಯವಿರುವ ಎಲ್ಲಾ ಆಯೆಗಳನ್ನು ಉಳಿಸಿಕೊಳ್ಳಲಿದೆ ಎಂದು ಬುಧವಾರ ಬಿಡುಗಡೆಗೊಳಿಸಿದ‌ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇದೇ ವೇಳೆ ತೈವಾನ್ ನ ಪ್ರಮುಖ ಸೇನಾ ಹಾಗೂ ರಾಜಕೀಯ ಬೆಂಬಲಿಗನಾದ ಅಮೆರಿಕದ ಜೊತೆ ಸಮುದ್ರಯಾನ ಭದ್ರತೆಯಿಂದ ಹಿಡಿದು ಹವಾಮಾನ ಬದಲಾವಣೆವರೆಗಿನ ವಿಷಯಗಳ ಬಗ್ಗೆ ತಾನು ನಡೆಸುತ್ತಿರುವ ಮಾತುಕತೆಗಳನ್ನು ಕೂಡಾ ಸ್ಥಗಿತಗೊಳಿಸುವುದಾಗಿ ಅದು ಹೇಳಿದೆ. ಕಳೆದ ವಾರ ಅಮೆರಿಕ ಸಂಸತ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ಗೆ ಭೇಟಿಯಲ್ಲಿ ತನಗೆ ಈ ನಡೆಗಳನ್ನಿರಿಸಲು ಪ್ರೇರೇಪಿಸಿದೆ ಎಂದು ಚೀನಾ ಹೇಳಿಕೊಂಡಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ತೈವಾನ್, ಇಂತಹ ಭೇಟಿಗಳು ಸಾಮಾನ್ಯವಾಗಿವೆ ಹಾಗೂ ಬೆದರಿಕೆಗಳನ್ನು ಒಡ್ಡಲು ಚೀನಾಕ್ಕೆ ಅದೊಂದು ಕುಂಟು ನೆಪವಾಗಿದೆ ಎಂದು ಟೀಕಿಸಿದೆ.

ಚೀನಾದ ಸಮರಾಭ್ಯಾಸವು ಪಶ್ಚಿಮ ಪೆಸಿಫಿಕ್ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ಮಹತ್ವಾಕಾಂಕ್ಷೆಯನ್ನು ಪ್ರತಿಫಲಿಸುತ್ತಿದೆ ಎಂದು ತೈವಾನ್ನ ವಿದೇಶಾಂಗ ಸಚಿವ ಜೋಸೆಫ್ ವೂ ಹೇಳಿದ್ದಾರೆ.

  

‘‘ತೈವಾನ್ ಜಲಸಂಧಿಯ ಮೂಲಕ ಪೂರ್ವ ಹಾಗೂ ದಕ್ಷಿಣ ಚೀನಾ ಸಮುದ್ರಗಳನ್ನು ನಿಯಂತ್ರಿಸುವುದೇ ಚೀನಾದ ಕಾರ್ಯತಂತ್ರವಾಗಿದೆ ಹಾಗೂ ಒಂದು ವೇಳೆ ದಾಳಿ ನಡೆದಲ್ಲಿ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ತೈವಾನ್ ನ ನೆರವಿಗೆ ಬಾರದಂತೆ ತಡೆಯುವುದೇ ಇದರ ಉದ್ದೇಶವಾಗಿದೆ’’ ಎಂದು ಜೋಸೆಫ್ ವೂ ತಿಳಿಸಿದ್ದಾರೆ.

ತೈವಾನ್ ಜಲಸಂಧಿಯ ಮೇಲೆ ನಿರಂತರ ನಿಗಾ: ಬೀಜಿಂಗ್

ಒಂದು ವಾರದ ಸಮರಾಭ್ಯಾಸದ ಬಳಿಕ ತೈವಾನ್ ದ್ವೀಪದ ಆಸುಪಾಸಿನಲ್ಲಿನ ವಿವಿಧ ಕಾರ್ಯಗಳನ್ನು ತಾನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಚೀನಾ ಬುಧವಾರ ಘೋಷಿಸಿದೆ. ತೈವಾನ್ ಜಲಸಂಧಿಯಲ್ಲಿನ ಸನ್ನಿವೇಶಗಳಲ್ಲಿ ಉಂಟಾಗುವ ಯಾವುದೇ ಬದಲಾವಣೆಗಳ ಬಗ್ಗೆ ಚೀನಿ ಪಡೆಗಳು ನಿಕಟವಾದ ನಿಗಾವಿರಿಸಲಿವ ಎಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಪೂರ್ವ ಪ್ರಾಂತದ ಕಮಾಂಡರ್, ಅಧಿಕೃತ ಸಾಮಾಜಿಕ ಜಾಲತಾಣ ವೈಬೊದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News