ಟ್ರಂಪ್ ನಿವಾಸದ ಮೇಲೆ ಎಫ್ಬಿಐ ದಾಳಿ ಅಧ್ಯಕ್ಷೀಯ ದಾಖಲೆಗಳಿಗಾಗಿ ಶೋಧ: ಬೆಂಬಲಿಗರಿಂದ ವ್ಯಾಪಕ ಆಕ್ರೋಶ

Update: 2022-08-10 16:48 GMT

ವಾಶಿಂಗ್ಟನ್,ಆ.9: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲಾರಿಡಾದ ವೈಭವೋಪೇತ ನಿವಾಸ ಮಾರಾಲಾಗೋ ಎಸ್ಟೇಟ್ ಮೇಲೆ ಫೆಡರಲ್ ತನಿಖಾ ದಳ (ಎಫ್ಬಿಐ)ದ ಅಧಿಕಾರಿಗಳು ಸೋಮವಾರ ನಡೆಸಿದ ದಾಳಿಗೆ ರಿಪಬ್ಲಿಕನ್ ಪಕ್ಷದ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

  ‌

ಅಮೆರಿಕದ 45ನೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಟ್ರಂಪ್ ಅವರು 2021ರ ಜನವರಿಯಲ್ಲಿ ಅಧಿಕಾರದಿಂದ ನಿರ್ಗಮಿಸಿದ ಬಳಿಕ ತನ್ನೊಂದಿಗೆ ಒಯ್ದಿದ್ದ ಅಧ್ಯಕ್ಷೀಯ ದಾಖಲೆಗಳನ್ನು ದುರುಪಯೋಗಪಡಿಸಿರುವ ಸಾಧ್ಯತೆಯ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಎಫ್ಬಿಐ ಈ ದಾಳಿಗಳನ್ನು ನಡೆಸಿದೆ ಎಂದು ಅಮೆರಿಕದ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಟ್ರಂಪ್ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ದಾಳಿಗಳು ನಡೆದಿರುವುದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

2024ರಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ತನ್ನ ಅಭ್ಯರ್ಥನವನ್ನು ಕೂಡಲೇ ದೃಢಪಡಿಸುವಂತೆ ಅವರ ಬೆಂಬಲಿಗರು 76 ವರ್ಷ ವಯಸ್ಸಿನ ಟ್ರಂಪ್ ಅವರನ್ನು ಆಗ್ರಹಿಸಿದ್ದಾರೆ. ಫ್ಲಾರಿಡಾದ ವೆಸ್ಟ್ ಪಾಮ್ ಬೀಚ್ನಲ್ಲಿರುವ ತನ್ನ ಮಾರ್ಲಾಗೊ ರಿಸಾರ್ಟ್ ಮೇಲೆ ನಡೆದ ಎಫ್ಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ‘‘ಅಮೆರಿಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ಇತರ ಯಾರಿಗೂ ಕೂಡಾ ಹಿಂದೆಂದೂ ಇಂತಹದ್ದು ನಡೆದಿರಲಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News