ಅಖಿಲ ಭಾರತ ತೆರಿಗೆದಾರರ ಸಂಘ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂಬ ಸುದ್ದಿಯ ಸತ್ಯಾಂಶವೇನು?

Update: 2022-08-11 12:27 GMT

ಹೊಸದಿಲ್ಲಿ: ವಿವಿಧ ಸರಕಾರಗಳು, ರಾಜಕೀಯ ಪಕ್ಷಗಳು ಜನರಿಗೆ ಉಚಿತ ವಿದ್ಯುತ್,(Free Electricity) ನೀರು ಮುಂತಾದ ಸವಲತ್ತುಗಳನ್ನು ನೀಡುವ ಮೊದಲು ಅವುಗಳನ್ನು ಅನುಮೋದಿಸಲು ಹಾಗೂ ನಿಗಾ ವಹಿಸಲು ಅಖಿಲ ಭಾರತ ತೆರಿಗೆದಾರರ ಸಂಘ ಸ್ಥಾಪನೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂಬರ್ಥ ನೀಡುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಸುದ್ದಿಯು ಸುಳ್ಳಾಗಿದ್ದು, ಇಂತಹಾ ಯಾವುದೇ ಆದೇಶ ಸುಪ್ರೀಂಕೋರ್ಟ್‌ ನೀಡಿಲ್ಲ ಎಂದು thequint.com ತನ್ನ ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.

ಯಾವುದೇ ಸರಕಾರಕ್ಕೆ ಇಂತಹ ಉಚಿತ ಸವಲತ್ತುಗಳನ್ನು "ಜಗತ್ತಿನ ಈ ಅತ್ಯಂತ ದೊಡ್ಡ ಸಂಘಟನೆಯ" ಅನುಮತಿಯಿಲ್ಲದೆ ನೀಡಲು ಸಾಧ್ಯವಾಗದು ಎಂದೂ ವೈರಲ್ ಪೋಸ್ಟ್ ನಲ್ಲಿ ನೀಡಲಾಗಿದೆ.

ಇದನ್ನೂ ಓದಿ: ದೋಷಪೂರಿತ ರಾಷ್ಟ್ರಧ್ವಜಗಳ  ಪೂರೈಕೆದಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ: ಬಿಎಂಸಿಗೆ ಶಿವಸೇನೆ ಎಚ್ಚರಿಕೆ

ಆದರೆ ಈ ವೈರಲ್ ಪೋಸ್ಟ್ ನಲ್ಲಿ ತಿಳಿಸಲಾದಂತೆ ಸುಪ್ರೀಂ ಕೋರ್ಟ್ ಯಾವುದೇ ಆದೇಶ ಹೊರಡಿಸಿಲ್ಲ. ಆದರೆ ಇತ್ತೀಚೆಗೆ  ಬಿಜೆಪಿ  ವಕ್ತಾರ ಹಾಗೂ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾ,  ಪಕ್ಷಗಳು ಹಾಗೂ ಸರಕಾರಗಳು ಭರವಸೆ ನೀಡುವ ಅಥವಾ ಒದಗಿಸುವ ಉಚಿತ ವಸ್ತುಗಳು ಅಥವಾ ಫ್ರೀಬೀಗಳ ಮೇಲೆ ನಿಗಾ ಇಡಲು ಎಲ್ಲಾ ಸಂಬಂಧಿತರನ್ನೊಳಗೊಂಡ ತಜ್ಞ ಸಮಿತಿ ರಚಿಸುವಂತೆ ಹಾಗೂ ಇದರಲ್ಲಿ ವಿತ್ತ ಆಯೋಗ, ರಿಸರ್ವ್ ಬ್ಯಾಂಕ್ ನೀತಿ ಆಯೋಗ ಮತುಂತಾದ  ಸಂಸ್ಥೆಗಳ ಪ್ರತಿನಿಧಿಗಳೂ ಇರಬೇಕು ಎಂದು ಹೇಳಿತ್ತು.

ಆದರೆ ಸುಪ್ರೀಂ ಕೋರ್ಟಿನ ಈ ಸಲಹೆಯನ್ನೇ ಮುಂದಿಟ್ಟುಕೊಂಡು ಅಖಿಲ ಭಾರತ ತೆರಿಗೆದಾರರ ಸಂಘ ಸ್ಥಾಪನೆಗೆ ನ್ಯಾಯಾಲಯ ಆದೇಶಿಸಿದೆ ಎಂಬರ್ಥದ ಸುಳ್ಳು ಪೋಸ್ಟ್ ಅನ್ನು ಮಾಡಲಾಗಿತ್ತು.

ಕೃಪೆ: Thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News