ಉಚಿತ ವೀಲ್‌ಚಯರ್ ವಿತರಣೆ: ಫಲಾನುಭವಿಗಳಿಂದ ಅರ್ಜಿ ಆಹ್ವಾನ

Update: 2022-08-11 16:51 GMT
ಸಾಂದರ್ಭಿಕ ಚಿತ್ರ

ಉಡುಪಿ : ರೋಟರಿ ಕ್ಲಬ್ ಸಾಯ್ಬರಕಟ್ಟೆ ಮತ್ತು ರೋಟರಿ ಕ್ಲಬ್ ಹಾಸನ ಹೊಯ್ಸಳ ಜಂಟಿಯಾಗಿ ಅರ್ಹರಿಗೆ ಉಚಿತ ವೀಲ್‌ಚಯರ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.

ಬಡತನದಲ್ಲಿರುವ ಅಂಗವಿಕಲರು, ನಡೆಯಲಾರದ ನಿಶ್ಶಕ್ತ ವಯೋವೃದ್ದರ ಕ್ಷೇಮಾಭಿವೃದ್ಧಿಗಾಗಿ ಈ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ಆಸಕ್ತ ಫಲಾನುಭವಿಗಳು ಅಥವಾ ಅವರ ಕುಟುಂಬಿಕರು ದೂರವಾಣಿ ನಂಬರ್: ೯೮೮೬೮೩೨೦೦೮ ಅನ್ನು ಸಂಪರ್ಕಿಸಬಹುದು ಎಂದು ರೋಟರಿ ಕ್ಲಬ್ ಸಾಯ್ಬರಕಟ್ಟೆ ಇದರ ಅಧ್ಯಕ್ಷ ಸನ್ಮತ್ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News