ಉತ್ತರಪ್ರದೇಶ: ಯಮನಾ ನದಿಯಲ್ಲಿ ದೋಣಿ ಮಗುಚಿ ಕನಿಷ್ಠ ನಾಲ್ವರ ಸಾವು, ಹಲವರು ನಾಪತ್ತೆ

Update: 2022-08-11 17:50 GMT

ಬಂಡಾ,ಆ.11: ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಮರ್ಕಾ ಪ್ರದೇಶದಲ್ಲಿ ಗುರುವಾರ ಯಮುನಾ ನದಿಯಲ್ಲಿ ದೋಣಿಯೊಂದು ಮಗುಚಿದ ಪರಿಣಾಮ ಕನಿಷ್ಠ ನಾಲ್ವರು ಜಲಸಮಾಧಿಯಾಗಿದ್ದಾರೆ ಮತ್ತು ಇತರ ಹಲವರು ನಾಪತ್ತೆಯಾಗಿದ್ದಾರೆ.
ದೋಣಿಯು ಮರ್ಕಾದಿಂದ ಫತೇಪುರ ಜಿಲ್ಲೆಯ ಜರಾವುಲಿ ಘಾಟ್ಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.
ದೋಣಿ 30-35 ಜನರನ್ನು ಸಾಗಿಸುತ್ತಿತ್ತು. ನಾಪತ್ತೆಯಾಗಿರುವವರ ಹುಡುಕಾಟಕ್ಕಾಗಿ ಮುಳುಗುಗಾರರ ನೆರವು ಪಡೆಯಲಾಗಿದೆ ಎಂದು ಎಸ್ಪಿ ಅಭಿನಂದನ ತಿಳಿಸಿದರು.
ಏಳೆಂಟು ಜನರು ಈಜಿ ಪಾರಾಗಿದ್ದಾರೆ ಮತ್ತು ಹಲವರು ಮುಳುಗಿರುವ ಭೀತಿಯಿದೆ. ಈವರೆಗೆ ನಾಲ್ಕು ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಲಕ್ಷ್ಮೀನಿವಾಸ ಮಿಶ್ರಾ ತಿಳಿಸಿದರು.
ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದುರಂತದಲ್ಲಿ ಜೀವಹಾನಿಗಾಗಿ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News