ಹಿಂದೂ ರಾಷ್ಟ್ರದ ಸಂವಿಧಾನ ಸಿದ್ಧಪಡಿಸುತ್ತಿರುವ ಸ್ವಾಮೀಜಿಗಳ ಗುಂಪು !

Update: 2022-08-13 03:34 GMT

ಹೊಸದಿಲ್ಲಿ: ದೇಶದ ಸ್ವಾಮೀಜಿಗಳು ಮತ್ತು ಚಿಂತಕರ ಗುಂಪೊಂದು 'ಹಿಂದೂರಾಷ್ಟ್ರ ಭಾರತ'ದ ಸಂವಿಧಾನ ಸಿದ್ಧಪಡಿಸುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ. 2023ರ ಮಾಘಮೇಳದ ಸಂದರ್ಭ ನಡೆಯುವ ಧರ್ಮಸಂಸತ್‍ನಲ್ಲಿ ಸಂವಿಧಾನದ ಕರಡನ್ನು ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವರ್ಷದ ಮಾಘ ಮೇಳ ನಡೆದ ಫೆಬ್ರವರಿಯಲ್ಲಿ ಭಾರತವನ್ನು ಹಿಂದೂರಾಷ್ಟ್ರವಾಗಿಸುವ ಮತ್ತು ತನ್ನದೇ ಸಂವಿಧಾನವನ್ನು ಹೊಂದುವ ಸಂಬಂಧ ನಿರ್ಣಯ ಆಂಗೀಕರಿಸಲಾಗಿತ್ತು. ಇದೀಗ ಸುಮಾರು 30 ಮಂದಿಯ ತಂಡ ಶಾಂಭವಿ ಪೀಠಾಧೀಶ್ವರರ ನೇತೃತ್ವದಲ್ಲಿ ಸಂವಿಧಾನದ ಕರಡು ಸಿದ್ಧಪಡಿಸುತ್ತಿದೆ ಎಂದು ವಾರಣಾಸಿಯ ಶಂಕರಾಚಾರ್ಯ ಪರಿಷತ್‍ನ ಸ್ವಾಮಿ ಆನಂದ ಸ್ವರೂಪ ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಸಂವಿಧಾನವು 750 ಪುಟಗಳನ್ನು ಹೊಂದಿರುತ್ತದೆ ಹಾಗೂ ಇದರ ಸ್ವರೂಪವನ್ನು ವಿಸ್ತೃತವಾಗಿ ಚರ್ಚಿಸಲಾಗುತ್ತಿದೆ. ಧಾರ್ಮಿಕ ಮುಖಂಡರು ಹಾಗೂ ತಜ್ಞರ ನಡುವೆ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 2023ರ ಮಾಘಮೇಳದಲ್ಲಿ ಅರ್ಧದಷ್ಟು ಅಂದರೆ ಸುಮಾರು 300 ಪುಟಗಳ ಕರಡು ಬಿಡುಗಡೆ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಶಿಕ್ಷಣ, ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ, ಮತದಾನ ವ್ಯವಸ್ಥೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ 32 ಪುಟಗಳನ್ನು ಇದೀಗ ಪೂರ್ಣಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News