ಪ್ರಮುಖ ಭಯೋತ್ಪಾದಕ ಬೆದರಿಕೆಯನ್ನು ವಿಫಲಗೊಳಿಸಿದ ಪಂಜಾಬ್ ಪೊಲೀಸರು

Update: 2022-08-14 10:25 GMT
Photo:PTI

ಚಂಡೀಗಢ: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ರವಿವಾರ ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಭಯೋತ್ಪಾದನಾ ಗುಂಪನ್ನು ಭೇದಿಸಿ ನಾಲ್ವರನ್ನು ಬಂಧಿಸಲಾಗಿದೆ( busted a Pakistan ISI-backed terror module) ಎಂದು  ಪಂಜಾಬ್ ಪೊಲೀಸರು ಹೇಳಿದ್ದಾರೆ.

ಮೂರು ಕೈ ಗ್ರೆನೇಡ್‌ಗಳು, ಒಂದು ಐಇಡಿ (ಸುಧಾರಿತ ಸ್ಫೋಟಕ ಸಾಧನ), ಎರಡು ಪಿಸ್ತೂಲ್‌ಗಳು ಮತ್ತು 40 ಕಾರ್ಟ್ರಿಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಸ್ವಾತಂತ್ರ್ಯ ದಿನದ ಮುನ್ನ, ಪಂಜಾಬ್ ಪೊಲೀಸರು ಪ್ರಮುಖ ಭಯೋತ್ಪಾದಕ ಬೆದರಿಕೆಯನ್ನು ವಿಫಲಗೊಳಿಸಿದ್ದಾರೆ ಹಾಗೂ ದಿಲ್ಲಿ  ಪೊಲೀಸರ ಸಹಾಯದಿಂದ ಪಾಕ್-ಐಎಸ್‌ಐ ಬೆಂಬಲಿತ ಭಯೋತ್ಪಾದಕ ಗುಂಪನ್ನು ಭೇದಿಸಿದ್ದಾರೆ. ಕೆನಡಾ ಮೂಲದ ಅರ್ಶ್ ದಲ್ಲಾ ಹಾಗೂ  ಆಸ್ಟ್ರೇಲಿಯಾ ಮೂಲದ ಗುರ್ಜಂತ್ ಸಿಂಗ್‌ಗೆ ಆಪ್ತರಾದ ನಾಲ್ವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪಂಜಾಬ್ ಪೊಲೀಸರು ಹಾಗೂ ದಿಲ್ಲಿ  ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.

ಮೂರು ಹ್ಯಾಂಡ್-ಗ್ರೆನೇಡ್‌ಗಳು (ಪಿ-86), 1 ಐಇಡಿ ಮತ್ತು 2-9 ಎಂಎಂ ಪಿಸ್ತೂಲ್‌ಗಳು ಮತ್ತು 40 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ.

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪಂಜಾಬ್‌ನಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News