ಮೂಡುಬಿದ್ರೆ: ಅಲ್-ಫುರ್ಖಾನ್ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2022-08-15 17:23 GMT

ಮೂಡುಬಿದ್ರೆ: ಅಲ್-ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಕಾರ್ಯಕ್ರಮದ ಧ್ವಜಾರೋಹಣಗೈದ ಮುಖ್ಯ ಅತಿಥಿ ನಜ್ಮುದ್ದೀನ್ ಅಸ್ಸಾದಿ, ತಮ್ಮ ಸಂದೇಶ ಭಾಷಣ ಮಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ದೇಶ ಪ್ರೇಮದ ಬಗ್ಗೆ ಮಾತನಾಡಿ ಮಕ್ಕಳನ್ನು ಹುರುದುಂಬಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಂತರ ಜರುಗಿದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಭಾಷೆಗಳಲ್ಲಿ ಸ್ವಾತಂತ್ರ್ಯೋತ್ಸವದ ಕುರಿತು ಭಾಷಣ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿದರು. ಶಾಲಾ ಶಿಕ್ಷಕಿಯಾದ ಸಬೀನ ಖನಮ್ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಮನ ಮುಟ್ಟುವಂತೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಆಲಿಮಾ ಕಾಲೇಜು ಪ್ರಾಂಶುಪಾಲರಾದ ಶೇಖ್ ಅಬ್ದುಲ್ ಮುಸವ್ವಿರ್ ಮದನಿ, ಆಡಳಿತಾಧಿಕಾರಿ ಮುಹಮ್ಮದ್ ಶಹಾಂ, ತಾಂತ್ರಿಕ ಆಡಳಿತಾಧಿಕಾರಿ ನೂರ್ ಮುಹಮ್ಮದ್, ಹಾಗೂ ಪ್ರಾಂಶುಪಾಲರಾದ ನಝ್ರಾನ, ಉಪ ಪ್ರಾಂಶುಪಾಲರುಗಳಾದ ಅಬ್ದುಲ್ ಜಬ್ಬಾರ್ ಹಾಗೂ ಅನೀಸ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮೊಹಮ್ಮದ್ ಅವೈಝ್ ಸ್ವಾಗತಿಸಿ, ರಾಝಿಮ್ ಯೂಸೂಫ್ ವಂದಿಸಿದರು. ಸಾದ್ ಝುಬೈರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News