ಕೊಪ್ಪ; ನೂರುಲ್ ಆಲಂ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2022-08-15 17:59 GMT

ಕೊಪ್ಪ; ರಾಘವೇಂದ್ರ ನಗರದ ನೂರುಲ್ ಆಲಂ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಸೀದಿಯ ಕಾರ್ಯದರ್ಶಿಗಳಾದ ಶಫಿ ಅಹ್ಮದ್ ರವರು, ಸ್ವಾಗತಿಸಿದರು. ಕಾರ್ಯಕ್ರಮದ ಗೌರವಾಧ್ಯಕ್ಷತೆಯನ್ನು ವಹಿಸಿದ್ದ ಅಹ್ಮದ್ ಹಾಜಿಯವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಸಮವಸ್ತ್ರಧಾರಿಗಳಾಗಿದ್ದ ಮದರಸ ಮಕ್ಕಳೊಂದಿಗೆ, ಸಭಿಕರೆಲ್ಲರೂ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ರಾಷ್ಟ್ರಧ್ವಜಕ್ಕೆ ಗೌರವಾರ್ಪಿಸಿದರು. ಮಸೀದಿಯ ಮುಖ್ಯ ಗುರುಗಳಾದ ಅಬ್ದುಲ್ಲ ದಾರಿಮಿ ಸ್ವಾತಂತ್ರ್ಯೋತ್ತರ ಭಾರತದ ಚರಿತ್ರೆಯನ್ನು ನೆನಪಿಸುತ್ತಾ, ಸ್ವಾತಂತ್ರ್ಯಕ್ಕಾಗಿ ಜೀವವನ್ನು ಮುಡಿಪಾಗಿಟ್ಟ ಹೋರಾಟಗಾರರಿಗೆ ಪ್ರಾರ್ಥಿಸುವುದರ ಮೂಲಕ ಗೌರವ ನಮನಗಳನ್ನು ಸಲ್ಲಿಸಿದರು.

ಮಸೀದಿಯ ಅಧ್ಯಕ್ಷ ಹಂಝ ಎ.ಬಿ.ಎ, ಉಪಾಧ್ಯಕ್ಷ ಅಬ್ದುರ್ರಹ್ಮಾನ್ ನಾರ್ವೆ (ಅದ್ಧಾಕ), ಖಜಾಂಚಿ ಹಾಗೂ ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷರು,‌ ಹಾಲಿ ಸದಸ್ಯ ಫೈರೋಝ್, ಗ್ರಾಮಪಂಚಾಯತಿ ಸದಸ್ಯರುಗಳಾದ ಪದ್ಮ ಟೀಚರ್, ಶೃತಿ ಅವರು ಶುಭ ಹಾರೈಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News