ಬೈಂದೂರು: ಧಾರ್ಮಿಕ ಕೇಂದ್ರಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

Update: 2022-08-16 08:47 GMT

ಬೈಂದೂರು, ಆ.16: ತಾಲೂಕಿನ ವಿವಿಧ ಮಸೀದಿ, ಮದ್ರಸಗಳಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ್ಯೊತ್ಸವವನ್ನು ಎಲ್ಲಾ ಧರ್ಮದವರ ಮುಖಂಡರನ್ನು ಆಹ್ವಾನಿಸಿ ಸಂಭ್ರಮದಿಂದ ಆಚರಿಸಲಾಯಿತು.

ನಾವುಂದ ಮೊಹಿದ್ದಿನ್ ಮಸೀದಿ, ನಾಗೂರು ನೂರ್ ಮಸೀದಿ, ಹಳಗೇರಿ ಜಾಮಿಯ ಮಸೀದಿ, ಗುಂಜಾನಗುಡ್ಡೆ ಮುಹಮ್ಮದೀಯ ಮದ್ರಸ, ಬೈಂದೂರು ಅಂಜುಮನ್ ಶಬಾಬುಲ್ ಇಸ್ಲಾಮ್ ವೆಲ್ಫೇರ್ ಟ್ರಸ್ಟ್, ಬೈಂದೂರು ಮುಹಮ್ಮದೀಯ ಮದ್ರಸ, ಯೋಜನಾ ನಗರದ ಸೈಯದಾ ಹಝಾನಿ ಐಶಾ ಮದ್ರಸ, ಹಡವಿನಕೋಣೆ ಫುರ್ಖಾನಿಯ ಮದ್ರಸ, ಹಡವಿಣಕೋಣೆ ಮಿಫ್ತಾಹುಲ್ ಉಲೂಮ್ ಮದ್ರಸ, ಕೇಸರಕೋಡಿ ರೌನಾಕುಲ್ ಇಸ್ಲಾಮ್ ಮದ್ರಸ ಹಾಗೂ ವಿವಿಧ ಮಸೀದಿ ಮದ್ರಸಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಈ ವೇಳೆ ಮಸೀದಿಯ ಉಲಮಾಗಳು ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಎಳೆ ಎಳೆಯಾಗಿ ಯುವಕರಿಗೆ ತಿಳಿಸಿ ದೇಶಪ್ರೇಮದ ಸಂದೇಶ ನೀಡಿದರು. ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News