ಸ್ವಚ್ಛ ಗಂಗಾ ಯೋಜನೆಗೆ 30,000 ಕೋಟಿ ರೂ. ಮಂಜೂರು: ಜಲಶಕ್ತಿ ಸಚಿವ

Update: 2022-08-16 17:17 GMT

ಹೊಸದಿಲ್ಲಿ, ಆ. 16: ಗಂಗಾ ಹಾಗೂ ಅದರ ಉಪನದಿಗಳನ್ನು ಸ್ವಚ್ಛಗೊಳಿಸುವ ಗುರಿ ಹೊಂದಿರುವ ಯೋಜನೆಗಳಿಗೆ 30,000 ಕೋ.ರೂ.ಗೂ ಅಧಿಕ ಮಂಜೂರು ಮಾಡಲಾಗಿದೆ ಎಂದು ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮಂಗಳವಾರ ತಿಳಿಸಿದ್ದಾರೆ. 

ಸೀಮಿತ ನೀರಿನ ಸಂಪನ್ಮೂಲಗಳ ಪ್ರಾಮುಖ್ಯತೆ ಕುರಿತು ಒತ್ತಿ ಹೇಳಿದ ಶೇಖಾವತ್, ಆರ್ಥಿಕ ಅಭಿವೃದ್ಧಿ ಆರಂಭವಾಗುವುದೇ ನಮ್ಮ ಜಲ ಸಂಪನ್ಮೂಲ ಹಾಗೂ ಇಂಧನದಿಂದ ಎಂದರು.

ಗಂಗಾ ಹಾಗೂ ಅದರ ಉಪನದಿಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ರೂಪಿಸಲಾಗಿದೆ. ಯೋಜನೆಗೆ 30,000 ಕೋ.ರೂ.ಗೂ ಅಧಿಕ ಮುಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 

‘ನಮಾಮಿ ಗಂಗಾ’ ಕಾರ್ಯಕ್ರಮವನ್ನು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ‘ಜನ ಆಂದೋಲನ’ವಾಗಿ ಪರಿವರ್ತಿಸಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಶೇಖಾವತ್, ಗಂಗಾ ನದಿ ಹರಿಯುವ 100ಕ್ಕೂ ಅಧಿಕ ಜಿಲ್ಲೆಗಳಲ್ಲಿ ನದಿ ಹಾಗೂ ಅದರ ಸ್ವಚ್ಛತೆಗೆ ಕೈಗೊಂಡ ಪರಿಹಾರ ಕ್ರಮಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಸೂಕ್ತ ಚರ್ಚೆ ನಡೆದಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News