ಉಕ್ರೇನ್‍ನ ಖರ್ಕೀವ್ ಮೇಲೆ ರಷ್ಯಾ ದಾಳಿ: ಮೂವರು ಮೃತ್ಯು

Update: 2022-08-18 02:48 GMT
ಫೈಲ್‌ ಫೋಟೊ

ಕೀವ್: ಉಕ್ರೇನ್‍ನ ಖರ್ಕೀವ್ ನಗರದ ಮೇಲೆ ರಷ್ಯಾ ಬುಧವಾರ ನಡೆಸಿದ ದಾಳಿಯಲ್ಲಿ ಕನಿಷ್ಠ ಮೂರು ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೇಯರ್ ಹೇಳಿದ್ದಾರೆ.

ದಾಳಿಯ ಕಾರಣದಿಂದ ಈಶಾನ್ಯ ನಗರದ ಫ್ಲ್ಯಾಟ್ ಒಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದೆ ಎಂದು ಇಗೋರ್ ತೆರೆಖೋವ್ ಟೆಲೆಗ್ರಾಂ ಆ್ಯಪ್‍ನಲ್ಲಿ ಪ್ರಕಟಿಸಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ನಡೆದ ಮೊದಲ ಹಂತದ ದಾಳಿಯ ಸಂದರ್ಭದಲ್ಲೇ ಕಿರ್ಖೋವ್‍ಗೆ ಮುತ್ತಿಗೆ ಹಾಕಲಾಗಿತ್ತು.‌

ಆದರೆ ರಷ್ಯಾ ಅಪಾರ ಶಸ್ತ್ರಾಸ್ತ್ರ, ಕ್ಷಿಪಣಿ ದಾಳಿ ನಡೆಸಿದರೂ ಉಕ್ರೇನ್‍ನ ಎರಡನೇ ಅತಿದೊಡ್ಡ ನಗರವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಭಾಗದಲ್ಲಿ ನೂರಾರು ಮಂದಿ ರಷ್ಯನ್ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಒಬ್ಬ ಮೃತಪಟ್ಟು, ಇತರ ಆರು ಮಂದಿ ಗಾಯಗೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಸೆರ್ಗಿ ಬೊಲೊವಿನೋವ್ ಹೇಳಿದ್ದಾರೆ ಎಂದು timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News