×
Ad

​ಉಡುಪಿ; ಶಾಲೆಗೆ ಹೋಗಲು ಮನಸ್ಸಿಲ್ಲದೆ ವಿದ್ಯಾರ್ಥಿ ಆತ್ಮಹತ್ಯೆ: ದೂರು

Update: 2022-08-19 22:13 IST

ಶಂಕರನಾರಾಯಣ, ಆ.19:  ಶಾಲೆಗೆ ಹೋಗಲು  ಮನಸ್ಸು  ಇಲ್ಲದೆ  ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಘಟನೆ ಆ.19ರಂದು ಬೆಳಗ್ಗೆ ಹೆಂಗವಳ್ಳಿ ಗ್ರಾಮದ ನಿಲ್ಸಕಲ್ ಎಂಬಲ್ಲಿ ನಡೆದಿದೆ.

ಮೃತರನ್ನು ಹಾಲಾಡಿ ಪ್ರೌಡಶಾಲೆಯ 9ನೇ ತರಗತಿ ವಿದ್ಯಾರ್ಥಿ ಗಣೇಶ  (14) ಎಂದು ಗುರುತಿಸಲಾಗಿದೆ.

ಶಾಲೆಗೆ ಹೋಗಲು ಮನಸ್ಸು ಇಲ್ಲದೆ ಮನ ನೊಂದ ಗಣೇಶ್,  ಮನೆಯ  ಪಕ್ಕದಲ್ಲಿ  ಇರುವ   ಸೌದೆ  ತುಂಬುವ  ಮಾಡಿನ ಒಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News