ವಂಡ್ಸೆ ಚಕ್ರ ನದಿಗೆ ಬಿದ್ದು ಮೃತ್ಯು
Update: 2022-08-19 22:17 IST
ಕುಂದಾಪುರ : ಅಕಸ್ಮಿಕವಾಗಿ ಕಾಲು ಜಾರಿ ನದಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಂಡ್ಸೆ ಅಡಿಕೆಕೊಡ್ಲು ಎಂಬಲ್ಲಿ ಆ.19ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಹೊಸೂರು ಗ್ರಾಮದ ಉದ್ದಿನಹಕ್ಲು ನಿವಾಸಿ ಜಯರಾಮ ಶೆಟ್ಟಿ(42) ಎಂದು ಗುರುತಿಸಲಾಗಿದೆ. ವಂಡ್ಸೆ ಅಡಿಕೆ ಕೊಡ್ಲು ಉದಯ ಕುಮಾರ್ ಶೆಟ್ಟಿ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ವಂಡ್ಸೆ ಚಕ್ರ ನದಿಗೆ ಕೈಕಾಲು ತೊಳೆಯಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಚಕ್ರ ನದಿಗೆ ಬಿದ್ದು ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಇವರ ಮೃತದೇಹವು ಗುಲ್ವಾಡಿ ಗ್ರಾಮದ ವಂಡ್ಸೆ ಸೇತುವೆಯ ಕೆಳಭಾಗದಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.