ಭಾರತದ ದೇಶಿ ಕಲಾಕೃತಿಗಳನ್ನು ಮರಳಿಸಿದ ಬ್ರಿಟನ್ ಮ್ಯೂಸಿಯಂ

Update: 2022-08-20 01:57 GMT
ಸಾಂದರ್ಭಿಕ ಚಿತ್ರ (Twitter)

ಗ್ಲಾಸ್ಗೊ: ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತದ ಅವಧಿಯಲ್ಲಿ ಲೂಟಿ ಮಾಡಲಾಗಿದ್ದ ಏಳು ಭಾರತೀಯ ಸಾಂಸ್ಕೃತಿಕ ಕಲಾಕೃತಿಗಳನ್ನು(artefacts ) ಶುಕ್ರವಾರ ನಡೆದ ಅಧಿಕೃತ ಸಮಾರಂಭದಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು. ಬ್ರಿಟನ್‍ನ ಮ್ಯೂಸಿಯಂ(museum) ಸೇವೆಗಳ ವಿಭಾಗ ಭಾರತೀಯ ಕಲಾಕೃತಿಗಳನ್ನು ಮರಳಿಸುತ್ತಿರುವುದು ಇದೇ ಮೊದಲು.

ಭಾರತೀಯ ಹೈಕಮಿಷನ್‍ನ ಉನ್ನತ ಅಧಿಕಾರಿಗಳು, ಸ್ಕಾಟ್ಲೆಂಡ್ ಸಿಟಿ ಮ್ಯೂಸಿಯಂ ಸಂಗ್ರಹಗಳನ್ನು ನಿರ್ವಹಿಸುತ್ತಿರುವ ಗ್ಲಾಸ್ಗೊ ಲೈಫ್‍ನ ಸದಸ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 18 ತಿಂಗಳ ಮಾತುಕತೆ ಬಳಿಕ ಈ ಕಲಾಕೃತಿಗಳ ಮಾಲೀಕತ್ವ ವರ್ಗಾವಣೆಗೆ ನಿರ್ಧರಿಸಲಾಗಿತ್ತು.

ವಾರ್ತಾಭಾರತಿಯ ನ್ಯೂಸ್ ಅಪ್ಡೇಟ್ಸ್ ನಿಮ್ಮ ವಾಟ್ಸ್ ಆಪ್ ಗೆ  ತಲುಪಬೇಕೇ ? ಈ ಲಿಂಕ್ https://bit.ly/3Cd3adz ಕ್ಲಿಕ್ ಮಾಡಿ ನಮ್ಮ ಗ್ರೂಪ್ Join ಆಗಿ.

ಈ ಪೈಕಿ ಆರು ಕಲಾಕೃತಿಗಳನ್ನು 1800ರ ಸುಮರಿಗೆ ಉತ್ತರ ಭಾರತದಿಂದ ಕಳ್ಳತನ ಮಾಡಲಾಗಿತ್ತು. ಏಳನೇ ಕಲಾಕೃತಿಯನ್ನು ಮೂಲ ಮಾಲಕನಿಂದ ಕದ್ದ ಬಳಿಕ ಅಕ್ರಮವಾಗಿ ಖರೀದಿಸಲಾಗಿತ್ತು. ಪವಿತ್ರ ಸ್ಥಳಗಳಾದ ಮಂದಿರ ಹಾಗೂ ದೇವಾಲಯಗಳಿಂದ ಇವುಗಳನ್ನು ಕಳವು ಮಾಡಲಾಗಿತ್ತು. ಬಳಿಕ ಸ್ಕಾಟ್ಲೆಂಡ್‍ನ ಸಿಟಿ ಮ್ಯೂಸಿಯಂಗೆ ಉಡುಗೊರೆಯಾಗಿ ನೀಡಲಾಗಿತ್ತು. ಗ್ಲಾಸ್ಗೊ ನೇತೃತ್ವದಲ್ಲಿ ಇವುಗಳನ್ನು ಮರಳಿಸುವ ಪ್ರಯತ್ನಗಳು 1998ರಿಂದಲೂ ನಡೆಯುತ್ತಿದ್ದವು ಎಂದು ಮ್ಯೂಸಿಯಂ ಮುಖ್ಯಸ್ಥ ಡಂಕನ್ ಡೋರ್ನನ್ ಹೇಳಿದ್ದಾರೆ.

ಈ ಕಲಾಕೃತಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ವಿತರಿಸುವ ನಿಟ್ಟಿನಲ್ಲಿ ನಮ್ಮ ಸೇವೆಯನ್ನು ಮುಂದುವರಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭಾರತ, ನೈಜೀರಿಯಾ ಹಾಗೂ ಅಮೆರಿಕದ ಸೌತ್ ಡಕೋಟಾದ ಮೂಲ ಮಾಲೀಕರಿಗೆ ಒಟ್ಟು 51 ಕಲಾಕೃತಿಗಳನ್ನು ಮರಳಿಸಲು ಗ್ಲಾಸ್ಗೊ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News