×
Ad

ಹಿಮಾಚಲ ಪ್ರದೇಶ: ಹಠಾತ್ ಪ್ರವಾಹ, ಭೂಕುಸಿತದಲ್ಲಿ ಮೂವರು ಮೃತ್ಯು, ಹಲವರು ನಾಪತ್ತೆ

Update: 2022-08-20 12:03 IST
Photo: Twitter/@ANI

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಹಾಗೂ  ಭೂಕುಸಿತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಹಾಗೂ  ಒಂದು ಡಜನ್‌ಗೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಗೋಹರ್ ಉಪವಿಭಾಗದ ಕಶನ್ ಗ್ರಾಮದಲ್ಲಿ ಭೂಕುಸಿತದ ಘಟನೆಯಲ್ಲಿ ಒಂದೇ ಕುಟುಂಬದ ಎಂಟು ಸದಸ್ಯರು ಸಮಾಧಿಯಾಗಿರುವ ಭೀತಿ ಇದೆ, ಆದರೆ ಬಾಗಿ ನುಲ್ಲಾದಲ್ಲಿ ಹಠಾತ್ ಪ್ರವಾಹದ ನಂತರ ಐದು ಜನರು ನಾಪತ್ತೆಯಾಗಿದ್ದಾರೆ.

ಚಂಬಾ ಜಿಲ್ಲೆಯ ಬಾನೆಟ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ.

ಭಾರೀ ಮಳೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ, ಕುಲು ಮತ್ತು ಮಂಡಿ ಜಿಲ್ಲಾಧಿಕಾರಿಗಳು ಅಂಗನವಾಡಿ ಕೇಂದ್ರಗಳು ಸೇರಿದಂತೆ ಎಲ್ಲಾ ಶಾಲೆಗಳನ್ನು (ಸರಕಾರಿ ಮತ್ತು ಖಾಸಗಿ) ಮುಚ್ಚಲು ಆದೇಶಿಸಿದ್ದಾರೆ.

ಭೂಕುಸಿತದಲ್ಲಿ ಪಂಚಾಯತ್ ಪ್ರಧಾನ್ ಖೇಮ್ ಸಿಂಗ್ ಅವರ ಮನೆಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಖೇಮ್ ಸಿಂಗ್ ಸೇರಿದಂತೆ ಎಂಟು ಕುಟುಂಬ ಸದಸ್ಯರು ಮನೆಯೊಳಗೆ ಸಮಾಧಿಯಾಗಿದ್ದಾರೆ ಎಂದು ಹೇಳಲಾಗಿದ್ದು, ನೆ ಮನೆಯ ಮೇಲ್ಛಾವಣಿಯನ್ನು ಒಡೆದು ಸಿಲುಕಿರುವವರನ್ನು ರಕ್ಷಿಸಲು ಸ್ಥಳೀಯ ಜನರು ಪ್ರಯತ್ನಿಸುತ್ತಿದ್ದಾರೆ.

ಮಾಹಿತಿ ಪಡೆದ ಮಂಡಿ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News