×
Ad

ಪಡುಬಿದ್ರೆ: ಮಾಜಿ ಮಂಡಲ ಪ್ರಧಾನ ಪೀಟರ್ ಆಲ್ಫ್ರೆಡ್ ಫುರ್ಟಾಡೋ ನಿಧನ

Update: 2022-08-23 19:26 IST

ಪಡುಬಿದ್ರೆ: ಹಿರಿಯ ಕಾಂಗ್ರೆಸಿಗರಾದ ಪೀಟರ್ ಆಲ್ಫ್ರೆಡ್ ಫುರ್ಟಾಡೋ(88) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಾಲುಮಟ್ಟು ಫುರ್ಟಾಡೋ ವಿಲ್ಲಾ ನಿವಾಸಿಯಾದ ಅವರಿಗೆ ಪತ್ನಿ, ಪಲಿಮಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೀತೇಂದ್ರ ಫುರ್ಟಾಡೋ ಸಹಿತ ಮೂವರು ಪುತ್ರರು, ನೋಟರಿ ವಕೀಲೆ ಶಾರ್ಲೆಟ್ ಫುರ್ಟಾಡೋ ಸಹಿತ ಇಬ್ಬರು ಪುತ್ರಿಯರು ಇದ್ದಾರೆ.

ಪ್ರಗತಿಪರ ಕೃಷಿಕರೂ, ಪಿಡಬ್ಲ್ಯುಡಿ ಗುತ್ತಿಗೆದಾರರೂ ಆದ ಅವರು, ಹೆಜಮಾಡಿ ಮತ್ತು ಪಲಿಮಾರು ಸಂಯುಕ್ತ ಮಂಡಲ ಪಂಚಾಯಿತಿಯ ಪ್ರಥಮ ಮಂಡಲ ಪ್ರಧಾನರಾಗಿ, ಅವರಾಲುಮಟ್ಟು ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕರಾಗಿ, ಪಡುಬಿದ್ರಿ ವ್ಯವಸಾಯಿಕ ಸೇವಾ ಸಹಕಾರಿ ಸೊಸೈಟಿಯ ಅಧ್ಯಕ್ಷರಾಗಿ, ಪಲಿಮಾರು ಸಂತ ಪಿಯುಸ್ ಚರ್ಚ್ ಪಾಲನಾ ಸಮಿತಿಯಲ್ಲಿ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿ, ಮುಲ್ಕಿ ಲಯನ್ಸ್ ಕ್ಲಬ್ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜ ಸೇವೆಯ ಮೂಲಕ ಜನಾನುರಾಗಿಯಾಗಿದ್ದರು.

ಅವರ ನಿಧನಕ್ಕೆ ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಎಮ್‍ಎಲ್‍ಸಿ ಐವನ್ ಡಿಸೋಜಾ ಸಹಿತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News