ನಿತೀಶ್ ಕುಮಾರ್ ಬಹುಮತ ಸಾಬೀತಿಗೆ ಮುಂಚಿತವಾಗಿ ಸ್ಪೀಕರ್ ಹುದ್ದೆ ತೊರೆದ ಬಿಜೆಪಿಯ ವಿಜಯಕುಮಾರ್ ಸಿನ್ಹಾ

Update: 2022-08-24 06:08 GMT
Photo:twitter

ಪಾಟ್ನಾ: ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಅಂತ್ಯಗೊಳಿಸಿ ಈ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ಜನತಾ ದಳ (RJD) ಹಾಗೂ  ಇತರ ಪಕ್ಷಗಳೊಂದಿಗೆ ಸರಕಾರ ರಚಿಸಿರುವ ನಿತೀಶ್ ಕುಮಾರ್(Nitish Kumar) ಅವರು ಬುಧವಾರ  ತಮ್ಮ ಬಹುಮತದ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಬಹುಮತ ಸಾಬೀತಿಗೆ ಕೆಲವೇ ಗಂಟೆಗಳ ಮೊದಲು ಸಿಬಿಐ ಇಬ್ಬರು ಆರ್‌ಜೆಡಿ ನಾಯಕರ ಮೇಲೆ ದಾಳಿ ನಡೆಸಿತ್ತು.

ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯುವುದರೊಂದಿಗೆ ವಿಧಾನಸಭೆ ಅಧಿವೇಶನ ಆರಂಭವಾಯಿತು. "ಮಹಾಘಟಬಂಧನ್" ಅಥವಾ ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದ ಕೂಡಲೇ ಸಿನ್ಹಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.

ಪಕ್ಷದ ಮುಖ್ಯಸ್ಥ ಲಾಲು ಯಾದವ್ ಯುಪಿಎ-1 ಸರಕಾರದಲ್ಲಿ ಕೇಂದ್ರ ರೈಲ್ವೇ ಸಚಿವರಾರಾಗಿದ್ದ ಅವಧಿಯಲ್ಲಿ ನಡೆದ “ಉದ್ಯೋಗಕ್ಕಾಗಿ ಭೂಮಿ” ಹಗರಣಕ್ಕೆ ಸಂಬಂಧಿಸಿದಂತೆ ಮೂವರು ಆರ್‌ಜೆಡಿ ನಾಯಕರಾದ ಸುನೀಲ್ ಸಿಂಗ್, ಡಾ ಫೈಯಾಝ್  ಅಹ್ಮದ್ ಹಾಗೂ  ಅಶ್ಫಾಕ್ ಕರೀಮ್ ಅವರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News