NDTVಯ 29% ಶೇರು ಅದಾನಿ ಗ್ರೂಪ್‌ ಪಾಲು: ರಾಜೀನಾಮೆ ಸುದ್ದಿಯ ಕುರಿತು ರವೀಶ್‌ ಕುಮಾರ್‌ ಹೇಳಿದ್ದೇನು?

Update: 2022-08-24 07:25 GMT

ಹೊಸದಿಲ್ಲಿ: ದೇಶದ ಖ್ಯಾತ ಮಾಧ್ಯಮ ಎನ್‌ಡಿಟಿವಿಯ 29.18% ಶೇರು ಪಾಲನ್ನು ಅದಾನಿ ಗ್ರೂಪ್‌(Adani Group) ಪಡೆದುಕೊಂಡಿದೆ ಎಂದು indianexpress.com ವರದಿ ಮಾಡಿದೆ. ಇನ್ನೂ 26% ಶೇರು ಪಡೆದುಕೊಳ್ಳುವ ಸಾಧ್ಯತೆ ಅಧಿಕವಾಗಿದೆ ಎಂದೂ ಅದು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ NDTV ಹಿರಿಯ ಕಾರ್ಯನಿರ್ವಾಹಕ ಸಂಪಾದಕ ರವೀಶ್‌ ಕುಮಾರ್‌(Ravish Kumar) ರಾಜೀನಾಮೆ ನೀಡುತ್ತಾರೆಂಬ ಸುದ್ದಿ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದ್ದು, ಈ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಅವರು, "ಪ್ರಧಾನಿ ನರೇಂದ್ರ ಮೋದಿ ನನ್ನೊಂದಿಗೆ ಸಂದರ್ಶನಕ್ಕೆ ತಯಾರಾದಂತೆ, ಅಕ್ಷಯ್‌ ಕುಮಾರ್‌ ಗೇಟಿನ ಬಳಿ ಮಾವಿನ ಹಣ್ಣುಗಳನ್ನು ಹಿಡಿದುಕೊಂಡು ನಿಂತಂತೆ ನನ್ನ ರಾಜೀನಾಮೆ ವಿಚಾರ ಕೂಡಾ ಒಂದು ವದಂತಿ ಮಾತ್ರವಾಗಿದೆ" ಎಂದು ಸಾರ್ವಜನಿಕರನ್ನು ಉಲ್ಲೇಖಿಸಿ ಹೇಳಿದ್ದಾರೆ. ಜೊತೆಗೆ ಕೊನೆಯಲ್ಲಿ ರವೀಶ್‌ ಕುಮಾರ್, ವಿಶ್ವದ ಪ್ರಥಮ ಅತೀ ದುಬಾರಿ ಝೀರೋ ಟಿಆರ್‌ಪಿ ನಿರೂಪಕ ಎಂದು ತಮ್ಮ ಕುರಿತು ವ್ಯಂಗ್ಯವಾಡಿದ್ದಾರೆ. 

ಅದಾನಿ ಕಂಪೆನಿಯು ಎನ್ಡಿಟಿವಿಯ ಪಾಲನ್ನು ಖರೀದಿಸಿರುವುದರಿಂದ ರವೀಶ್‌ ಕುಮಾರ್‌ ರಾಜೀನಾಮೆ ನೀಡಲಿದ್ದಾರೆ ಎಂಬ ಗಾಳಿಸುದ್ದಿ ವ್ಯಾಪಕವಾಗಿ ಹರಿದಾಡಿತ್ತು. ಈಗಾಗಲೇ Bloomberg quint ನಲ್ಲಿ ಅದಾನಿ ಕಂಪೆನಿಯು ಬಹುಪಾಲು ಶೇರನ್ನು ಹೊಂದಿದೆ. ಮಾಧ್ಯಮ ಕ್ಷೇತ್ರದಲ್ಲೂ ತನ್ನ ಪಾರಮ್ಯ ಮೆರೆಯುವಲ್ಲಿ ಅದಾನಿ ಗ್ರೂಪ್‌ ದಾಪುಗಾಲಿಡುತ್ತಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News