ಎನ್‌ಡಿಟಿವಿ ಷೇರುಗಳನ್ನು ಅದಾನಿ ಸ್ವಾಧೀನಪಡಿಸಿಕೊಂಡಿರುವುದು ಸ್ವತಂತ್ರ ಮಾಧ್ಯಮ ನಿಗ್ರಹಿಸುವ ಪ್ರಯತ್ನ: ಕಾಂಗ್ರೆಸ್

Update: 2022-08-24 08:29 GMT

 ಹೊಸದಿಲ್ಲಿ: ಸುದ್ದಿ ವಾಹಿನಿ ಎನ್‌ಡಿಟಿವಿ ಷೇರುಗಳನ್ನು ಅದಾನಿ ಎಂಟರ್‌ಪ್ರೈಸಸ್ ಪರೋಕ್ಷವಾಗಿ ಸ್ವಾಧೀನಪಡಿಸಿಕೊಂಡಿರುವ (Adani’s indirect acquisition of NDTV shares) ಬಗ್ಗೆ ಕಾಂಗ್ರೆಸ್ ಪಕ್ಷವು ಬುಧವಾರ ಕಳವಳ ವ್ಯಕ್ತಪಡಿಸಿದೆ.

ಅದಾನಿ ಗ್ರೂಪ್ (Adani Group)ಅಥವಾ ನ್ಯೂಸ್ ಚಾನೆಲ್ ಅನ್ನು ಹೆಸರಿಸದೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Congress leader Jairam Ramesh)ಮಾತನಾಡಿ, ಈ ಬೆಳವಣಿಗೆಯು ದೇಶದಲ್ಲಿ ಸ್ವತಂತ್ರ ಮಾಧ್ಯಮ ನಿಯಂತ್ರಿಸುವ ಹಾಗೂ  ಹತ್ತಿಕ್ಕುವ ನಿರ್ಲಜ್ಜ ಕ್ರಮವಾಗಿದೆ ಎಂದು ಹೇಳಿದರು.

"ಪ್ರಧಾನ ಮಂತ್ರಿಯವರ ‘ಖಾಸ್ ದೋಸ್ತ್’ ಒಡೆತನದ ಅತಿ ಹೆಚ್ಚು ಹತೋಟಿ ಹೊಂದಿರುವ ಕಂಪನಿಯು ಪ್ರಸಿದ್ಧ ಟಿವಿ ಸುದ್ದಿ ಜಾಲವನ್ನು ಪ್ರತಿಕೂಲವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದೆ ಎಂಬ ಸುದ್ದಿ ಆರ್ಥಿಕ ಹಾಗೂ  ರಾಜಕೀಯ ಶಕ್ತಿಯ ಕೇಂದ್ರೀಕರಣವಲ್ಲದೆ ಬೇರೇನೂ ಅಲ್ಲ ”ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.

ಎನ್‌ಡಿಟಿವಿ ಷೇರುಗಳನ್ನು ಅದಾನಿ ಪರೋಕ್ಷ ಸ್ವಾಧೀನಪಡಿಸಿಕೊಂಡಿರುವುದು ಸ್ವತಂತ್ರ ಮಾಧ್ಯಮವನ್ನು ನಿಗ್ರಹಿಸುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News