×
Ad

ಸುಳ್ಯ: ಕುಮಾರಧಾರ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

Update: 2022-08-24 19:20 IST
ಸ್ವಾಮಿ

ಸುಳ್ಯ: ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ಇಳಿದು ನಾಪತ್ತೆಯಾಗಿದ್ದ ಬೆಂಗಳೂರು ನಿವಾಸಿ ಸ್ವಾಮಿ ಎಂಬವರ ಮೃತದೇಹ ಪತ್ತೆಯಾಗಿದೆ. ಸತತವಾಗಿ ನಾಲ್ಕು ದಿನದ ಕಾರ್ಯಾಚರಣೆಯ ಬಳಿಕ ಬುಧವಾರ ಸಂಜೆ ಮೃತದೇಹ ಪತ್ತೆಯಾಗಿದೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಬೆಂಗಳೂರು ದೀಪಾಂಜಲಿ ನಗರದ ತಂಡದಲ್ಲಿದ್ದ ಸ್ವಾಮಿ ಅವರು ಕುಕ್ಕೆ ಸುಬ್ರಹ್ಮಣ್ಯದಿಂದ ಹಿಂತಿರುಗುವ ವೇಳೆ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದು, ಆ ಬಳಿಕ  ನಾಪತ್ತೆಯಾಗಿದ್ದರು. ಸತತ ಕಾರ್ಯಾಚರಣೆಯ ಬಳಿಕ ಬುಧವಾರ ಸಂಜೆ ಮೃತದೇಹವಾಗಿ ಪತ್ತೆಯಾಗಿದೆ.

ಸುಮಾರು 15 ಜನ ನುರಿತ ಈಜುಗಾರರು, ಸಮಾಜ ಸೇವಕ ರವಿಕಕ್ಕೆಪದವು, ಅಗ್ನಿಶಾಮಕ ದಳ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಗೃಹರಕ್ಷಕ ದಳ, ಸ್ಥಳೀಯ ಜನನಾಯಕರು ಹಾಗೂ ಸ್ಥಳೀಯರು ಸೇರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸ್ಥಳದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಗ್ರಾ. ಪಂಚಾಯತ್ ಪಿಡಿಒ ಯು.ಡಿ ಶೇಖರ್, ಸುಬ್ರಹ್ಮಣ್ಯ ಗ್ರಾ. ಪಂಚಾಯತ್ ಸದಸ್ಯರು, ಅಗ್ನಿಶಾಮಕದಳ ಹಾಗು ಸ್ಥಳೀಯರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News