ಲೈಂಗಿಕ ಕಿರುಕುಳ ಪ್ರಕರಣ:ಸಿವಿಕ್ ಚಂದ್ರನ್ ನಿರೀಕ್ಷಣಾ ಜಾಮೀನಿಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ

Update: 2022-08-24 16:00 GMT
Photo:PTI

ತಿರುವನಂತಪುರ, ಆ.24: ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿ ಕೋಝಿಕ್ಕೋಡ್ನ ಸೆಶನ್ಸ್ ನ್ಯಾಯಾಲಯ ಸಾಹಿತಿ ಸಿವಿಕ್ ಚಂದ್ರನ್ ಗೆ ನೀಡಿದ್ದ ನಿರೀಕ್ಷಣಾ ಜಾಮೀನಿಗೆ ಕೇರಳ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.

 ಮಹಿಳೆಯು ಒಂದು ವೇಳೆ ಲೈಂಗಿಕ ಪ್ರಚೋದನಕಾರಿಯಾದ ಉಡುಗೆಯನ್ನು ಧರಿಸಿದ್ದಲ್ಲಿ, ಆಗ ಮಹಿಳೆಯ ಗೌರವಕ್ಕೆ ಧಕ್ಕೆಯುಂಟು ಮಾಡಿರುವ ಕುರಿತ ಕಾನೂನು ಅನ್ವಯವಾಗುವುದಿಲ್ಲವೆಂದು ಕೋಝಿಕ್ಕೋಡ್ ಸೆಶನ್ಸ್ ಕೋರ್ಟ್ ನ್ಯಾಯಾಧೀಶ ಎಸ್.ಕೃಷ್ಣಕುಮಾರ್ ಅಭಿಪ್ರಾಯಿಸಿದ್ದರು ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಸಿವಿಕ್ಚಂದ್ರನ್ಗೆ ಜಾಮೀನು ಬಿಡುಗಡೆಗೊಳಿಸಿದ್ದರು. ಚಂದ್ರನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಲು ಸಮರ್ಪಕ ಪುರಾವೆಗಳಿಲ್ಲವೆಂದು ನ್ಯಾಯಾಧೀಶ ಕೃಷ್ಣಕುಮಾರ್ ತಿಳಿಸಿದ್ದರು.

   2020ರ ಫೆಬ್ರವರಿಯಲ್ಲಿ ನಾಂದಿ ಬೀಚ್ ನಲ್ಲಿ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಚಂದ್ರನ್ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯ ವಿಚಾರಣೆಯನ್ನು ಕೋಝಿಕ್ಕೋಡ್ ಸೆಶನ್ಸ್ ನ್ಯಾಯಾಲಯ ನಡೆಸಿತ್ತು.

  ಸೆಶನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇರಳ ಸರಕಾರವು ಹೈಕೋರ್ಟ್ನ ಮೆಟ್ಟಲೇರಿತ್ತು. ಕೆಳ ನ್ಯಾಯಾಲಯದ ತೀರ್ಪು ಅಕ್ರಮ, ಅನ್ಯಾಯಯುತವಾದುದಾಗಿದೆ ಹಾಗೂ ದೂರುದಾರ ಸಂತ್ರಸ್ತೆಗೆ ಮಾನಸಿಕ ಯಾತನೆಯುಂಟು ಮಾಡಬಹುದಾಗಿದೆ’’ ಎಂದು ಕೇರಳ ಸರಕಾರ ಅರ್ಜಿಯಲ್ಲಿ ತಿಳಿಸಿತ್ತು.

ಸೆಶನ್ಸ್ ನ್ಯಾಯಾಧೀಶ ಎಸ್.ಕೃಷ್ಣಕುಮಾರ್ ಅವರನ್ನು ಇದೀಗ ವರ್ಗಾವಣೆಗೊಳಿಸಿ, ಕೊಲ್ಲಂ ಜಿಲ್ಲೆಯ ಕಾರ್ಮಿಕ ನ್ಯಾಯಾಲಯದ ನಿರ್ವಹಣಾ ಅಧಿಕಾರಿಯಾಗಿ ನಿಯೋಜಿಸಿ ಕೇರಳ ಹೈಕೋರ್ಟ್ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News