×
Ad

ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿರುವ ಕಡೆ ಪ್ರಚಾರ ಮಾಡುವೆ, ಗುಂಪುಗಾರಿಕೆ ನೋವು ತಂದಿದೆ: ಆನಂದ್ ಶರ್ಮಾ

Update: 2022-08-25 10:03 IST
Photo:PTI

ಶಿಮ್ಲಾ: “ಪಕ್ಷಕ್ಕೆ ಪುನಶ್ಚೇತನದ ಅಗತ್ಯವಿದೆ ಹಾಗೂ  ಇದು ಸಾಮೂಹಿಕ ಪ್ರಯತ್ನದಿಂದ ಮಾತ್ರ ಸಾಧ್ಯ.   ಮುಂಬರುವ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿರುವ ಕಡೆ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್ ಪಕ್ಷವು ಗುಂಪುಗಾರಿಕೆಯಿಂದ ಹೊರಬಂದು ಒಗ್ಗಟ್ಟಾಗಿರಬೇಕು. ಇದು ನನಗೆ ನೋವು ತಂದಿದೆ. ನಾವೆಲ್ಲ ಕಾಂಗ್ರೆಸ್ಸಿಗರು. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿರುವುದು ಮುಖ್ಯ. ಕಾಂಗ್ರೆಸ್‌ಗೆ ಅಂತರ್ಗತ, ಸಾಮೂಹಿಕ ಚಿಂತನೆ ಮತ್ತು ಕಾಂಗ್ರೆಸ್ ನಾಯಕನ ಅಗತ್ಯವಿದೆ" ಎಂದು ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ( Senior Congress leader Anand Sharma)ಬುಧವಾರ ಹೇಳಿದ್ದಾರೆ.

ಬುಧವಾರ ಶಿಮ್ಲಾಗೆ ಭೇಟಿ ನೀಡಿದ ಅವರು, ಇಲ್ಲಿನ ಎಚ್‌ಪಿ ಕಾಂಗ್ರೆಸ್ ಸಮಿತಿ ರಾಜ್ಯ ಕಚೇರಿಯಲ್ಲಿ ರಾಜ್ಯ ಪಕ್ಷದ ಮುಖ್ಯಸ್ಥೆ ಪ್ರತಿಭಾ ವೀರಭದ್ರ ಸಿಂಗ್ ಅವರೊಂದಿಗೆ ಸಭೆ ನಡೆಸಿದರು.

ಶರ್ಮಾ ಅವರು ಪಕ್ಷದ ಸಂಚಾಲಕ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇದು ತವರು ರಾಜ್ಯದಲ್ಲಿ ಅವರ ಮೊದಲ ಸಭೆಯಾಗಿದೆ.

ಎಎನ್‌ಐ ಜೊತೆ ಮಾತನಾಡಿದ ಅವರು, ಪಕ್ಷಕ್ಕೆ ಪುನಶ್ಚೇತನದ ಅಗತ್ಯವಿದೆ ಮತ್ತು ಅದು ಸಾಮೂಹಿಕ ಪ್ರಯತ್ನದಿಂದ ಸಾಧ್ಯ ಎಂದು ಹೇಳಿದರು.

"ನಾವು ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದೇವೆ ಮತ್ತು ಈ ಸಮಸ್ಯೆಗಳನ್ನು ಈ ಹಿಂದೆ ಹಲವು ಸಭೆಗಳಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಮತ್ತು ಕೆಲವು ಪರಿಹರಿಸಲಾಗಿಲ್ಲ. ನಾವು ಕೆಲವು ಆಂತರಿಕ ಬದಲಾವಣೆಗಳನ್ನು ತಂದರೆ ಕಾಂಗ್ರೆಸ್ ಪುನರುಜ್ಜೀವನ ಖಚಿತ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ ಎಂದು  ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News