×
Ad

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತ ಸಹಾಯಕನನ್ನು ಬಂಧಿಸಿದ ಈಡಿ

Update: 2022-08-25 10:35 IST

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತ ಸಹಾಯಕ ಪ್ರೇಮ್ ಪ್ರಕಾಶ್ (Prem Prakash, an alleged close aide of Jharkhand Chief Minister Hemant Soren)ಅವರನ್ನು ಜಾರಿ ನಿರ್ದೇಶನಾಲಯ (ಈಡಿ) (Enforcement Directorate (ED)ಬಂಧಿಸಿದೆ. ಪ್ರಕಾಶ್ ಅವರ ನಿವಾಸದಿಂದ 2 ಎಕೆ -47 ರೈಫಲ್‌ಗಳನ್ನು ವಶಪಡಿಸಿಕೊಂಡ ಮರುದಿನ ಅವರನ್ನು ಬಂಧಿಸಲಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆಯ ನಂತರ ಪ್ರೇಮ್ ಪ್ರಕಾಶ್ ಅವರನ್ನು ಬುಧವಾರ ರಾತ್ರಿ ಬಂಧಿಸಲಾಯಿತು. ಅವರನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರಾಂಚಿಯಲ್ಲಿ ಬಂಧಿಸಲಾಗಿದೆ.

ಬುಧವಾರ ಪ್ರೇಮ್ ಪ್ರಕಾಶ್ ಅವರ ಮನೆಯಿಂದ ಎರಡು ಎಕೆ-47 ರೈಫಲ್‌ಗಳು ಮತ್ತು 60 ಕಾಟ್ರಿಡ್ಜ್‌ಗಳನ್ನು ಈಡಿ ವಶಪಡಿಸಿಕೊಂಡಿದೆ. 100 ಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರೇಮ್ ಪ್ರಕಾಶ್ ಅವರ ಜಾರ್ಖಂಡ್ ನಿವಾಸದಲ್ಲಿ ಈಡಿ ಅಧಿಕಾರಿಗಳು ಕಬ್ಬಿಣದ ಅಲ್ಮಿರಾದಲ್ಲಿ ಇರಿಸಲಾಗಿದ್ದ ಎರಡು ಎಕೆ -47 ಗಳನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಿದರು.

"ಪ್ರೇಮ್ ಪ್ರಕಾಶ್ ಅವರನ್ನು ಈಡಿ ಬಂಧಿಸಿದೆ. ಪ್ರಕಾಶ್ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹಾಗೂ  ಅವರ ಕುಟುಂಬ ಸ್ನೇಹಿತ ಅಮಿತ್ ಅಗರ್ವಾಲ್ ಅವರ ಸಹವರ್ತಿಯಾಗಿದ್ದು, ಅವರ (ಪ್ರಕಾಶ್) ನಂಟನ್ನು ಎನ್ ಐಎ ತನಿಖೆ ಮಾಡಬೇಕು"ಎಂದು  ಏತನ್ಮಧ್ಯೆ, ಬಿಜೆಪಿಯ ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಟ್ವೀಟ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News