ದಿಲ್ಲಿ ಸರಕಾರವನ್ನು ಬೀಳಿಸಲೆಂದೇ ಬಿಜೆಪಿ 800ಕೋಟಿ ರೂ. ಮೀಸಲಿಟ್ಟಿದೆ: ಕೇಜ್ರಿವಾಲ್‌ ಆರೋಪ

Update: 2022-08-25 10:37 GMT

ಹೊಸದಿಲ್ಲಿ: ಸರ್ಕಾರವನ್ನು ಉರುಳಿಸಲು ಭಾರತೀಯ ಜನತಾ ಪಕ್ಷ (BJP) 800 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, 40 ಶಾಸಕರನ್ನು ತಲಾ 20 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Aravind Kejrival) ಗುರುವಾರ ಆರೋಪಿಸಿದ್ದಾರೆ. 70 ಸದಸ್ಯ ಬಲದ ಸದನದಲ್ಲಿ ಆಪ್ 62 ಶಾಸಕರನ್ನು ಹೊಂದಿದ್ದರೆ, ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ.

ದಿಲ್ಲಿ ಸರ್ಕಾರವನ್ನು ಉರುಳಿಸಲು ಅವರು 800 ಕೋಟಿ ರೂಪಾಯಿಗಳನ್ನು ಇಟ್ಟುಕೊಂಡಿದ್ದಾರೆ. ಪ್ರತಿ ಶಾಸಕರಿಗೆ 20 ಕೋಟಿ ರೂಪಾಯಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. “ದೇಶವು ತಿಳಿಯಲು ಬಯಸುತ್ತದೆ, ದೇಶವು ತಿಳಿದುಕೊಳ್ಳಲು ಬಯಸುತ್ತದೆ, ಅದು ಯಾರ ಹಣ ಮತ್ತು ಅದನ್ನು ಎಲ್ಲಿ ಇರಿಸಲಾಗಿದೆ? ನಮ್ಮ ಯಾವ ಶಾಸಕರೂ ಭಿನ್ನ ಮತ ತೋರುವುದಿಲ್ಲ. ನಮ್ಮ ಸರ್ಕಾರ ಸ್ಥಿರವಾಗಿದೆ. ದಿಲ್ಲಿಯಲ್ಲಿ ನಮ್ಮ ಉತ್ತಮ ಕೆಲಸ ಮುಂದುವರಿಯುತ್ತದೆ". ಎಂದು ಅವರು ಹೇಳಿದ್ದಾರೆ.

ಶಾಸಕರನ್ನು ಖರೀದಿಸಲು ಬಿಜೆಪಿಯ ಪ್ರಯತ್ನಗಳನ್ನು ಎದುರಿಸಲು ಕಾರ್ಯತಂತ್ರವನ್ನು ರೂಪಿಸಲು ಇಂದು ಬೆಳಿಗ್ಗೆ ಎಲ್ಲಾ ಆಪ್ ಶಾಸಕರು ಕೇಜ್ರಿವಾಲ್ ಅವರ ನಿವಾಸದಲ್ಲಿ ಭೇಟಿಯಾದರು. ನಂತರ, ಪಕ್ಷದ ನಾಯಕರು "ಬಿಜೆಪಿಯ ಆಪರೇಷನ್ ಕಮಲದ ವೈಫಲ್ಯಕ್ಕಾಗಿ ಪ್ರಾರ್ಥಿಸಲು" ಮಹಾತ್ಮ ಗಾಂಧಿಯವರ ಸ್ಮಾರಕವಾದ ರಾಜ್‌ಘಾಟ್‌ಗೆ ತೆರಳಿದರು.

ರಾಜ್‌ಘಾಟ್‌ನಲ್ಲಿ, ಈ ವಾರದ ಆರಂಭದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಅವರ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದ ದಾಳಿಯಲ್ಲಿ ಏನೂ ಪತ್ತೆಯಾಗಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News