×
Ad

ಅಗ್ನಿಪಥ್‌ ಯೋಜನೆಗೆ ತಡೆಯಾಜ್ಞೆ ನೀಡಲು ದಿಲ್ಲಿ ಹೈಕೋರ್ಟ್‌ ನಿರಾಕರಣೆ

Update: 2022-08-25 19:55 IST
photo :NDTV

ಹೊಸದಿಲ್ಲಿ,ಆ.25: ಸಶಸ್ತ್ರಪಡೆಗಳಲ್ಲಿ ಅಲ್ಪಾವಧಿಯ ನೇಮಕಾತಿಗಾಗಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆಗೆ ತಡೆಯಾಜ್ಞೆ ನೀಡಲು ದಿಲ್ಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ ಹಾಗೂ ಈ ಅರ್ಜಿಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಉತ್ತರ ನೀಡುವಂತೆಯೂ ಕೇಂದ್ರ ಸರಕಾರವನ್ನು ಸೂಚಿಸಿದೆ.

    ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳಿಗೆ ಕ್ರೋಢೀಕೃತ ಉತ್ತರವನ್ನು ನೀಡುವಂತೆಯೂ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ತಿಳಿಸಿದೆ.

     ಹದಿನೇಳೂವರೆ ವರ್ಷ ಹಾಗೂ 21 ವರ್ಷದ ನಡುವಿನ ವಯೋಮಾನದ ಯುವಜನರನ್ನು ಸೇನಾಪಡೆಗಳಿಗೆ ನಾಲ್ಕು ವರ್ಷಗಳ ಅಲ್ಪಾವಧಿಗೆ ನೇಮಕಗೊಳಿಸುವ ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರಕಾರವು ಜೂನ್ 14ರಂದು ಘೋಷಿಸಿತ್ತು. ಹೀಗೆ ಅಲ್ಪಾವಧಿಯ ಸೇವೆಗೆ ಆಯ್ಕೆಯಾದವರಲ್ಲಿ ಶೇ. 25ರಷ್ಟು ಮಂದಿಯನ್ನು ಇನ್ನೂ 15 ವರ್ಷಗಳ ಕಾಲ ಸೇವೆಯಲ್ಲಿ ಉಳಿಸಿಕೊಳ್ಳುವ ಅವಕಾಶವನ್ನು ಕೂಡಾ ಯೋಜನೆಯಲ್ಲಿ ಒದಗಿಸಲಾಗಿದೆ.

ಅಗ್ನಿಪಥ್ ಯೋಜನೆಯನ್ನು ಕೇಂದ್ರ ಸರಕಾರ ಘೋಷಿಸಿದ ಬೆನ್ನಲ್ಲೇ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು.ಆನಂತರ ಕೇಂದ್ರ ಸರಕಾರವು ನೇಮಕಾತಿಯ ಗರಿಷ್ಠ ವಯೋಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News