ಇಮ್ರಾನ್ ಜಾಮೀನು ಅವಧಿ ವಿಸ್ತರಣೆ
Update: 2022-08-25 21:19 IST
ಇಸ್ಲಮಾಬಾದ್, ಆ.೨೫: ಭಯೋತ್ಪಾದನೆ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ಖಾನ್ಗೆ ಮಂಜೂರುಗೊಳಿಸಿದ್ದ ಬಂಧನ ಪೂರ್ವ ಜಾಮೀನನ್ನು ಸೆಪ್ಟಂಬರ್ ೧ರವರೆಗೆ ವಿಸ್ತರಿಸಲಾಗಿದೆ ಎಂದು ಇಮ್ರಾನ್ ಅವರ ವಕೀಲರು ಹೇಳಿದ್ದಾರೆ.
ಇಮ್ರಾನ್ ಬಿಗಿಭದ್ರತೆಯ ಮಧ್ಯೆ ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಅವಧಿಯ ವಿಸ್ತರಣೆಗೆ ಸಲ್ಲಿಸಿದ ಕೋರಿಕೆಯನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಇಮ್ರಾನ್ ಹಲವು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಅವರಿಗೆ ಪ್ರಚಾರಕ್ಕೆ ಅವಕಾಶ ನೀಡಲು ದೀರ್ಘಾವಧಿಯ ವಿಸ್ತರಣೆಗೆ ಮನವಿ ಮಾಡಿದ್ದೆವು.
ಆದರೆ ನ್ಯಾಯಾಲಯ ಒಂದು ವಾರ ಮಾತ್ರವಿಸ್ತರಿಸಿದೆ. ಸೆಪ್ಟಂಬರ್ ೧ರ ಬಳಿಕ ಮತ್ತೆ ವಿಸ್ತರಣೆಗೆ ಅರ್ಜಿ ಸಲ್ಲಿಸಲಾಗುವುದು ಎಂದವರು ಹೇಳಿದ್ದಾರೆ.