×
Ad

​ಪ್ರಬಂಧ ಸ್ಪರ್ಧೆ: ಅನನ್ಯ, ಪ್ರಜ್ವಲ್ ಪ್ರಥಮ ಬಹುಮಾನ

Update: 2022-08-25 22:19 IST
ಪ್ರಜ್ವಲ್  /  ಅನನ್ಯ 

ಉಡುಪಿ: ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ಮತ್ತು ಮುರಾರಿ ಬಲ್ಲಾಳ್ ಚಿಂತನ ಫೌಂಡೇಶನ್ ಅಂಬಲಪಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಏರ್ಪಡಿಸಿದ್ದ ‘ಉಡುಪಿ ಜಿಲ್ಲೆಯ ಸ್ವಾತಂತ್ರ ಹೋರಾಟಗಾರರು’ ಎಂಬ ವಿಷಯದ ಕುರಿತ ಉಡುಪಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪಟ್ಲ ಯು.ಎಸ್. ನಾಯಕ್ ಪ್ರೌಢ ಶಾಲೆಯ ಅನನ್ಯ ಮತ್ತು ಆದಿ ಉಡುಪಿ ಪ್ರೌಢಶಾಲೆಯ ಪ್ರಜ್ವಲ್ ಪ್ರಥಮ ಬಹುಮಾನದೊಂದಿಗೆ ತಲಾ 1500 ರೂ.ನಗದು ಬಹುಮಾನ ಗೆದ್ದುಕೊಂಡಿದ್ದಾರೆ.

ಕಿದಿಯೂರು ವಿದ್ಯಾಸಮುದ್ರ ತೀರ್ಥ ಹೈಸ್ಕೂಲ್‌ನ ಭಾಗ್ಯಶ್ರೀ, ಪಡುಬಿದ್ರಿ ಗಣಪತಿ ಪ್ರೌಢ ಶಾಲೆಯ ಆದರ್ಶ ಕೆ ಪೂಜಾರಿ ಮತ್ತು ಆದಿ ಉಡುಪಿ ಪ್ರೌಢ ಶಾಲೆಯ ಮಂಜುನಾಥ್ ದ್ವಿತೀಯ ಬಹುಮಾನದೊಂದಿಗೆ ತಲಾ 1000 ರೂ. ಪಡೆದಿದ್ದಾರೆ.

ಹಿರಿಯಡ್ಕ ಕೆಪಿಎಸ್‌ನ ಸೌಮ್ಯ, ಪಟ್ಲ ಯು.ಎಸ್.ನಾಯಕ್ ಪ್ರೌಢ ಶಾಲೆಯ ಅಶ್ವಿನಿ ತೃತೀಯ ಬಹುಮಾನ ಪಡೆದಿದ್ದಾರೆ. ಇದೇ ಆ.27ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಆದಿ ಉಡುಪಿ ಪ್ರೌಢ ಶಾಲೆಯಲ್ಲಿ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News