ರಶ್ಯದೊಂದಿಗೆ ವ್ಯಾವಹಾರಿಕ ಸಂಬಂಧ ಮುಂದುವರಿಸಿದರೆ ಟರ್ಕಿ ವಿರುದ್ಧ ನಿರ್ಬಂಧ: ಅಮೆರಿಕ ಎಚ್ಚರಿಕೆ

Update: 2022-08-25 17:30 GMT

ವಾಷಿಂಗ್ಟನ್, ಆ.೨೫: ರಶ್ಯದೊಂದಿಗೆ ವ್ಯಾವಹಾರಿಕ ಸಂಬಂಧವನ್ನು ಮುಂದುವರಿಸಿದರೆ ಟರ್ಕಿಯ ವಿರುದ್ಧ ನಿರ್ಬಂಧ ಜಾರಿಗೊಳಿಸುವುದಾಗಿ ಅಮೆರಿಕ ಎಚ್ಚರಿಸಿದೆ ಎಂದು ಟರ್ಕಿಯ ಅಧಿಕಾರಿಗಳು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ರಶ್ಯದ ಸೋಚಿ ನಗರದಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ಭೇಟಿಯಾಗಿದ್ದ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್, ಆರ್ಥಿಕ ಸಹಕಾರ ಸಂಬAಧವನ್ನು ವೃದ್ಧಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದರು.

ಮೇ ತಿಂಗಳಿಂದ ಜುಲೈ ನಡುವಿನ ಅವಧಿಯಲ್ಲಿ ರಶ್ಯಕ್ಕೆ ಟರ್ಕಿಯಿಂದ ರಫ್ತಿನ ಪ್ರಮಾಣದಲ್ಲಿ ಸುಮಾರು ೫೦%ದಷ್ಟು ವೃದ್ಧಿಯಾಗಿರುವುದಾಗಿ ವರದಿಯಾಗಿದೆ.

ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ರಶ್ಯ ಸರಕಾರ ಟರ್ಕಿಯನ್ನು ಬಳಸಿಕೊಳ್ಳುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಅಮೆರಿಕ ಈ ಎಚ್ಚರಿಕೆ ರವಾನಿಸಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News